ಹಳಿ ತಪ್ಪಿದ ಬೋಗಿಗಳು

0
294

ರಾಷ್ಟ್ರೀಯ ಪ್ರತಿನಿಧಿ ವರದಿ
ದೇಹತ್’ನ ರೂರಾ-ಮೀರತ್ ನಡುವೆ ಸಂಚರಿಸುತ್ತಿದ್ದ 12988 ಸಂಖ್ಯೆಯ ಸೇಲ್ದ- ಅಜ್ಮೇರ್ ಎಕ್ಸ್’ಪ್ರೆಸ್ ರೈಲಿನ 15 ಬೋಗಿಗಳು ಹಳಿ ತಪ್ಪಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ರೂರಾ ಬಳಿ ಸಂಭವಿಸಿದೆ.
 
 
ಕಾನ್ಪುರರಿಂದ 50 ಕಿ.ಮೀ ದೂರದಲ್ಲಿರುವ ದೇಹತ್’ನಲ್ಲಿ ಮುಂಜಾನೆ 5.20ಕ್ಕೆ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಗಾರ್ಡ್ ಸೇರಿದಂತೆ 40 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ.
 
 
ಬೋಗಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕೆಲಸ ಭರದಿಂದ ಸಾಗಿದೆ. ಆ ರೈಲಿನಲ್ಲಿ ಪ್ರಯಾಣಿಸುತ್ತಿರುವವರನ್ನು ಬೇರೆ ರೈಲಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲಾಡಳಿತ ಹಾಗೂ ರೈಲ್ವೆ ಅಧಿಕಾರಿಗಳು ಪರಿಹಾರ ಹಾಗೂ ನೆರವು ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಆದಾಗ್ಯೂ ಹೆಚ್ಚಿನ ಪರಿಹಾರ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿದೆ.
 
 
 
ಸಹಾಯವಾಣಿ:
ರೈಲ್ವೆ ಇಲಾಖೆ ಗಾಯಗೊಂಡವರ ನೆರವಿಗಾಗಿ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು, ಸಂಬಂಧಿಸಿದವರು: 09935024350 ಹಾಗೂ 0979485953 ಸಂಪರ್ಕಿಸಬಹುದು.
ಅಲಿಘಡ್: 0571-2404056, 2404055
 
 
 
ಸಚಿವರಿಂದ ತನಿಖೆಗೆ ಆದೇಶ:
ಉತ್ತರಪ್ರದೇಶದ ಕಾನ್ಪುರ ಬಳಿ ಹಳಿತಪ್ಪಿ ಎಕ್ಸ್ ಪ್ರೆಸ್ ರೈಲು ಪ್ರಕರಣದ ಬಗ್ಗೆ ಕೇಂದ್ರ ರೈಲ್ವೆ ಇಲಾಖೆ ಸಚಿವ ಸುರೇಶ್ ಪ್ರಭು ಉನ್ನತ ತನಿಖೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಯ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here