ಹಳಿ ತಪ್ಪಿದ ಕುರ್ಲಾ-ಅಂಬೇರ್ ನಾಥ್ ರೈಲು

0
357

ರಾಷ್ಟ್ರೀಯ ಪ್ರತಿನಿಧಿ ವರದಿ
ಕುರ್ಲಾ-ಅಂಬೇರ್ ನಾಥ್ ರೈಲೊಂದು ಹಳಿ ತಪ್ಪಿದ್ದ ಘಟನೆ ಮುಂಬೈನ ಥಾಣೆ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದಿದೆ. ಘಟನೆಯಲ್ಲಿ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
 
 
ಥಾಣೆಯ ಕಲ್ಯಾಣ್ ಮತ್ತು ವಿತ್ತಲ್ವಾಡಿ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 5.23 ಸುಮಾರಿಗೆ ಘಟನೆ ನಡೆಸಿದ್ದು, ಕರ್ಲಾ-ಅಂಬೇರ್ ನಾಥ್ ಸ್ಥಳೀಯ ರೈಲಿನ 5 ಬೋಗಿಗಳು ಹಳಿ ತಪ್ಪಿದೆ.
 
 
ರೈಲು ಹಳಿ ತಪ್ಪಿದ್ದರಿಂದಾಗಿ ಕೆಲವೆಡೆ ರೈಲು ಸಂಚಾರದಲ್ಲಿ ವ್ಯತ್ಯಯಗಳು ಉಂಟಾಗಿದ್ದು, ಕಲ್ಯಾಣ್-ಕರ್ಜತ್ ಕಡೆಯಿಂದ ಬರುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 
 
 
ನಿನ್ನೆಯಷ್ಟೇ ಉತ್ತರ ಪ್ರದೇಶದ ಕಾನ್ಪುರದ ಬಳಿ ಅಜ್ಮೆರ್-ಸೀಲ್ದಹ್ ಎಕ್ಸ್ ಪ್ರೆಸ್ ರೈಲೊಂದು ಹಳಿ ತಪ್ಪಿತ್ತು. ಘಟನೆಯಲ್ಲಿ 62 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು.

LEAVE A REPLY

Please enter your comment!
Please enter your name here