ಹಳಿಗಿಳಿದ ಹೈಸ್ಪೀಡ್

0
144

ನವದೆಹಲಿ ಪ್ರತಿನಿಧಿ ವರದಿ
ದೇಶದ ಮೊದಲ ಹೈಸ್ಪೀಡ್ ಟ್ರೇನ್ ಗೆ ಇಂದು ಚಾಲನೆ ದೊರಕಿದೆ. ಇಂದಿನಿಂದ ದೇಶದ ಅತ್ಯಂತ ವೇಗದ ರೈಲು ಹಳಿಗಿಳಿದಿದೆ.
 
ಇಂದು ಬೆಳಗ್ಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಸೆಮಿ-ಹೈಸ್ಪೀಡ್ ರೈಲಾದ ಗಟಿಮಾನ್ ಎಕ್ಸ್ ಪ್ರೆಸ್ ಗೆ ಚಾಲನೆ ನೀಡಿದ್ದಾರೆ. ರಿಮೋಟ್ ಮೂಲಕ ಚಾಲನೆ ನೀಡಿದ್ದಾರೆ.
 
ದೇಶದ ಅತಿ ವೇಗದ ರೈಲಾದ ಗಟಿಮಾನ್ ಗಂಟೆಗೆ 140ರಿಂದ 160 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ದೆಹಲಿ ಮತ್ತು ಆಗ್ರಾ ನಡುವಿನ 210 ಕಿ.ಮೀ ದೂರವನ್ನು 100 ನಿಮಿಷಗಳಲ್ಲಿ ಕ್ರಮಿಸಲಿದೆ.
 
ಪ್ರತಿ ದಿನ ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 8.10ಕ್ಕೆ ಹೊರಡಲಿರುವ ಈ ಎಕ್ಸ್ ಪ್ರೆಸ್ 90ರಿಂದ 100 ನಿಮಿಷಗಳಲ್ಲಿ ಆಗ್ರಾ ತಲುಪಲಿದೆ. ಶುಕ್ರವಾರ ಹೊರತು ಒಡಿಸಿ ವಾರದ ಎಲ್ಲಾ ದಿನ ಸಂಚಾರ ನಡೆಸಲಿದೆ.
 
 
ಪ್ರಯಾಣಿಕರಿಗೆ ಅನೂಕೂಲವಾಗಲೆಂದು ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ. ರೈಲು ಪ್ರಯಾಣಿಕರು ಮನರಂಜನೆ ವಿಡಿಯೋಗಳನ್ನು ನೋಡಬಹುದಾಗಿದೆ. ಪ್ರತಿ ಬೋಗಿಯಲ್ಲೂ ಕಸ ಹಾಕಲು ವಿಶೇಷ ಡಬ್ಬಿ ಅಳವಡಿಕೆ, ಸ್ವಯಂಚಾಲಿತ ಬಾಗಿಲು, ವಿಶೇಷವಾಗಿ ವಿನ್ಯಾಸಗೊಳಸಿರುವ 12 ಎಸಿ ಬೋಗಿಗಳು ಈ ರೈಲಿನಲ್ಲಿದೆ.

LEAVE A REPLY

Please enter your comment!
Please enter your name here