ವಾರ್ತೆ

ಹಲ್ಲೆ

ಮಂಗಳೂರು ಪ್ರತಿನಿಧಿ ವರದಿ
ಯುವಕನ ಮೇಲೆ ಹಲ್ಲೆ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲದ ರಹ್ಮಾನಿಯಾ ಮಸೀದಿ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.
 
 
 
ಇಲ್ಲಿನ ನಿವಾಸಿ ನೌಶಾದ್(23) ಎಂಬಾತನ ಮೇಲೆ ಹಲ್ಲೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಿಡಿಕೇಡಿಗಳು ಯುವಕನ ಕೈಯನ್ನು ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ. ಆರೋಪಿಗಳನ್ನು ರಮಿತ್ ಮತ್ತು ಆತನ ಸಹಚರರು ಎಂದು ಗುರುತಿಸಲಾಗಿದ್ದು, ಇವುಗಳು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದರು.
 
 
 
ಸದ್ಯ ನೌಶಾದ್ ಉಳ್ಳಾಲದ ಆಸ್ಪತ್ರೆಯಲ್ಲು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿಸಿಪಿ ಶಾಂತರಾಜು, ಎಸಿಪಿ ಶೃತಿ,ಇನ್ ಸ್ಪೆಕ್ಟರ್ ಗೋಪಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here