ಹಲಸು ಮೇಳ

0
225

 
ಮ0ಗಳೂರು ಪ್ರತಿನಿಧಿ ವರದಿ
ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಜಂಟಿಯಾಗಿ ಜುಲೈ 9 ಹಾಗೂ 10 ರಂದು ಪಿಲಿಕುಳದಲ್ಲಿ ಹಲಸು ಮೇಳ ವನ್ನು ಆಚರಿಸಲು ನಿರ್ಧರಿಸಲಾಗಿದೆ.
 
 
 
ಹಲಸಿನ ಹಣ್ಣು ಮತ್ತು ಅದರ ಉತ್ಪನ್ನಗಳನ್ನು ಪ್ರಚಾರ ಮಾಡಲು ಮತ್ತು ರೈತರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಮೇಳವನ್ನು ಆಯೋಜಿಸಲಾಗಿದೆ. ಕಳೆದ ಎರಡು ವರ್ಷದ ಅನುಭವದ ಆಧಾರದಲ್ಲಿ, ಈ ಮೇಳಕ್ಕೆ ಅಪಾರ ಸಂಖ್ಯೆಯ ರೈತರು ಹಾಗೂ ಸಾರ್ವಜನಿಕರು ಆಗಮಿಸಲಿದ್ದಾರೆ.
 
 
 
ಈ ಮೇಳಕ್ಕೆ ಮಳಿಗೆಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ರೈತರು, ಹಲಸು ಬೆಳೆಗಾರರು, ಹಲಸು ಉತ್ಪನ್ನಗಳ ತಯಾರಕರು ತಮ್ಮ ಹೆಸರನ್ನು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರವನ್ನು 0824-2431872 ನಂಬರಿಗೆ ಅಥವಾ ಡಾ. ಹರೀಶ್ ಶೆಣೈ (09448297154) ಇವರಿಗೆ ಕರೆಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here