ಹಲಸಿನ ಕಾಯಿ ಕಾಬಾಬ್

0
388

ವಾರ್ತೆ ರೆಸಿಪಿ:
ಬೇಕಾಗುವ ಸಾಮಾಗ್ರಿಗಳು:
1 ಎಳೆ ಹಲಸಿನ ಕಾಯಿ, 1/2 ಕಪ್ ಬೇಳೆ, 1ಬೆಳ್ಳುಳ್ಳಿ, ಸ್ವಲ್ಪ ಚಕ್ಕೆ ಮತ್ತು ಲವಂಗ, 1/2 ಕಪ್ ಕಡಲೆ ಹಿಟ್ಟು, 1 ಚಮಚ ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು, ಎಣ್ಣೆ, ಶುಂಠಿ (ಎರಡು ಇಂಚಿನಷ್ಟು), ಕತ್ತರಿಸಿದ ಈರುಳ್ಳಿ, ಅರಿಶಿಣ.
 
 
ತಯಾರಿಸುವ ವಿಧಾನ:
ಹಲಸಿನ ಕಾಯಿಯ ಸಿಪ್ಪೆಯನ್ನು ಕೆತ್ತಿ ಬಿಸಾಡಬೇಕು. ಈಗ ಅದನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ. ಈಗ ಅದನ್ನು ಬೇಳೆ ಜೊತೆ ಹಾಕಿ ಸವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿ. ಬೆಂದ ಮೇಲೆ ಚಿಟಿಕೆಯಷ್ಟು ಉಪ್ಪು 2-3 ನಿಮಿಷ ಬೇಯಿಸಿ. ನಂತರ ಅದರಲ್ಲಿರುವ ಅಧಿಕ ನೀರನ್ನು ಸೋಸಿ ತೆಗೆಯಬೇಕು. ಬೆಂದ ಹಲಸಿನ ಕಾಯಿ ಮತ್ತು ಬೇಳೆಗೆ ಬೆಳ್ಳುಳ್ಳಿ, ಚಕ್ಕೆ, ಲವಂಗ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸಿಯಲ್ಲಿ ತರತರಿಯಾಗಿ ಅರೆಯಬೇಕು. ಈಗ ಅರೆದ ಮಿಶ್ರಣಕ್ಕೆ ಮೆಣಸಿನ ಪುಡಿ, ಅರಿಶಿಣ ಹಾಕಿ, ಕತ್ತರಿಸಿದ ಈರುಳ್ಳಿ, ಜಜ್ಜಿದ ಶುಂಠಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು. ನಂತರ ಆ ಮಿಶ್ರಣದಿಂದ ಕಬಾಬ್ ಉಂಡೆಗಳನ್ನು ಮಾಡಿ ಅದನ್ನು ಸ್ವಲ್ಪ ಚಪ್ಪಟೆಯಾಗಿ ತಟ್ಟಬೇಕು. ಮೊದಲೆ ಕಡಲೆಹಿಟ್ಟನ್ನು ಸ್ವಲ್ಪ ನೀರು ಹಾಕಿ ಕಲೆಸಿರಬೇಕು. ಈ ಹಿಟ್ಟಿಗೆ ಕಬಾಬ್ ಉಂಡೆಯನ್ನು ಅದ್ದಿ ಎಣ್ಣೆಯಲ್ಲಿ ಹಾಕಿ ಹುರಿದರೆ ಹಲಸಿನ ಕಾಯಿ ಕಬಾಬ್ ರೆಡಿ.

LEAVE A REPLY

Please enter your comment!
Please enter your name here