ಹರಿಹರನ್ ಸಂಗೀತಕ್ಕೆ ತಲೆದೂಗಿದ ಜನಸಮೂಹ!

0
1624

ಮೂಡಬಿದರೆ: ಆಳ್ವಾಸ್ ವಿರಾಸತ್ ರಜತ ಮಹೋತ್ಸವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಶುಕ್ರವಾರ ಸಂಜೆ ಮೂಡಬಿದಿರೆಯ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರುಗಿತು. ಸುಪ್ರಸಿದ್ಧ ಗಾಯಕ ಪದ್ಮಶ್ರೀ ಶ್ರೀ ಹರಿಹರನ್ ಈ ರಜತ ಮಹೋತ್ಸವದ ಆಳ್ವಾಸ್ ವಿರಾಸತ್ – 2019 ರ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಕೊಲೋನಿಯಲ್ ಕಸಿಸ್ಸ್ ಖ್ಯಾತಿಯ ಹರಿಹರನ್ ಮತ್ತು ಲೆಸ್ಲೆಲಿವಿಸ್ ಶುಕ್ರವಾರ ರಸ ಸಂಯೋಗ ಕಾರ್ಯಕ್ರಮದ ಮೂಲಕ ಎರಡು ಗಂಟೆಗಳ ಕಾಲ ಜನರಿಗೆ ಸಂಗೀತ ಲೋಕಕ್ಕೆ ಕೊಂಡೈಯುವಲ್ಲಿ ಯಶಸ್ವಿಯಾದರು.
ಕೃಷ್ಣ ನೀ ಬೇಗನೆ ಬಾರೊ,ಕಾಶೇ ಹೇ ಸಾ ಕೋಹಿ ಮಂಜಿಲ್ ಹೋತಾ ಹೆ, ಗೋವಿಂದ ಬೋಲೊ ಹರೆ ಗೋಪಾಲ ಬೋಲೊ ಹರೆ, ರೈನ್ ಫಾಲ್ಸ್ ಇನ್ ಅರೋಂಡ್,ಲವ್ ಫಾರ್ ಯು ಸೇರಿದಂತೆ ಇಂಗ್ಲಿಷ್ ಹಾಡುಗಳನ್ನು ಹೆಚ್ಚಾಗಿ ಹಾಡಿದರು.
ಇಲ್ಲಿ ಮೂರು ದಿನಗಳ ಕಾಲ ಸಂಗೀತ ಕ್ಷೇತ್ರದ ದಿಗ್ಗಜರಾದ ಹರಿಹರನ್ ; ಲೆಸ್ಲಿ ಲಿವಿಸ್ ; ಸುಖವಿಂದರ್ ಸಿಂಗ್ ಹಾಗೂ ಶಂಕರ್ ಮಹಾದೇವನ್ , ಸಿದ್ಧಾರ್ಥ ಮಹದೇವನ್ ಅವರು ಮಧುರ ಗಾನ ಸುಧೆ ಆಳ್ವಾಸ್ ವಿರಾಸತ್ ನಲ್ಲಿ ಮೋಳಗಲಿದೆ.

LEAVE A REPLY

Please enter your comment!
Please enter your name here