ಹಬ್ಬದ ವಿಶೇಷ ಅಡುಗೆ

0
448

ವಾರ್ತೆ ವಿಶೇಷ
ತಂಬಿಟ್ಟು
ಬೇಕಾಗುವ ಸಾಮಗ್ರಿಗಳು: ಕಡಲೆ ಹಿಟ್ಟು 1/2 ಕೆ.ಜಿ, ಬೆಲ್ಲ 2 ಅಚ್ಚು, ಕೊಬ್ಬರಿ 1/4 ಕೆ.ಜಿ, ಗಸಗಸೆ-100 ಗ್ರಾಂ, ಬಿಳಿ ಎಳ್ಳು 100 ಗ್ರಾಂ.
ವಿಧಾನ: ತುಪ್ಪದಲ್ಲಿ ಕಡಲೆಹಿಟ್ಟನ್ನುಹಿರಿಯಬೇಕು. ಪಾತ್ರೆಯಲ್ಲಿ ಬೆಲ್ಲ ಹಾಕಿ ನೀರು ಬೆರಸಿ ಒಲೆಯ ಮೇಲಿಡಿ. ಬೆಲ್ಲ ಕರಗಿ ಅಂಟು ಪಾಕ ಆಗುವವರೆಗೂ ಒಲೆಯ ಮೇಲೆ ಇರಲಿ. ನಂತರ ಉರಿ ಸಣ್ಣಗೆ ಮಾಡಿ, ಅಕ್ಕಿ ಹಿಟ್ಟು, ಕೊಬ್ಬರಿ ತುರಿ, ಗಸಗಸೆ, ಎಳ್ಳು ಸೇರಿಸಿ ಚೆನ್ನಾಗಿ ಗೊಟಾಯಿಸಿ ಪಾತ್ರೆಯನ್ನು ಕೆಳಗಿಳಿಸಿ. ಎರಡೂ ಕೈಗಳಿಗೆ ತುಪ್ಪ ಸವರಿಕೊಂಡು ಸಣ್ಣ-ಸಣ್ಣ ತಂಬಿಟ್ಟಿನ ಉಂಡೆಗಳನ್ನು ಕಟ್ಟಿ.
 
 
ಶೇಂಗಾ ಉಂಡೆ
ಬೇಕಾಗುವ ಸಾಮಗ್ರಿಗಳು: ಶೇಂಗಾ 1/2 ಕೆ.ಜಿ, ಬೆಲ್ಲ 2 ಅಚ್ಚು (ಪುಡಿ ಮಾಡಿದ್ದು), ಒಣ ಕೊಬ್ಬರಿ 1/2 ಗಿಟಕು (ತುರಿದದ್ದು)
ತಯಾರಿಸುವ ವಿಧಾನ: ಬಾಣಲೆಯಲ್ಲಿ ಶೇಂಗಾ ಹಾಕಿ ಚೆನ್ನಾಗಿ ಹುರಿದು ಮರವೊಂದಕ್ಕೆ ಬಗ್ಗಿಸಿಕೊಂಡು ಬೀಜದ ಹೊಟ್ಟು ತೆಗೆಯಿರಿ. ನಂತರ ಮಿಕ್ಸಿಯಲ್ಲಿ ತರಿತರಿಯಗಿ ಪುಡಿ ಮಡಿಕೊಂಡು, ಅದಕ್ಕೆ ಬೆಲ್ಲ ಹಾಕಿ ಇನ್ನೊಂದು ಸುತ್ತು ಮಿಕ್ಸಿಯಲ್ಲಿ ತಿರುಗಿಸಿ, ಅದಕ್ಕೆ ಕೊಬ್ಬರಿತುರಿ ಸೇರಿಸಿ ಉಂಡೆಗಳನ್ನು ಕಟ್ಟಿಡಿ.
 
ಕುಚ್ಚಿದ ಕಡುಬು
ಬೇಕಾಗುವ ಸಾಮಗ್ರಿಗಳು: ತೋಗರಿ ಬೇಳೆ 1ಪಾವು, ಬೆಲ್ಲ 1ಪಾವು, ಕಾಯಿತುರಿ 1 ಬಟ್ಟಲು. ಮೈದಾ ಹಿಟ್ಟು 1 ಪಾವು, ಅಗತ್ಯವಿದ್ದಷ್ಟು ಎಣ್ಣೆ ಮತ್ತು ತುಪ್ಪ.
ತಯಾರಿಸುವ ವಿಧಾನ: ಮೈದಾ ಹಿಟ್ಟನ್ನು ಜರಡಿ ಹಿಡಿದು, ಅದಕ್ಕೆ 1ಚಮಚ ತುಪ್ಪ ಹಾಕಿ, ಬೇಕಾದಷ್ಟು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅರ್ಧ ಗಂಟೆ ನೆನೆಯಲು ಬಿಡಿ. ತೋಗರಿಬೇಳೆ ಬೇಯಿಸಿ ಹೆಚ್ಚಿನ ನೀರನ್ನು ಬಸಿಯಿರಿ. ಕಾಯಿತುರಿ ಹುರಿದುಕೊಂಡು, ಅದಕ್ಕೆ ಬೆಲ್ಲ, ಬೆಂದ ಬೇಳೆ ಹಾಕಿ ಹೂರಣದ ಹದಕ್ಕೆ ಬರುವವರೆಗೂ ಒಲೆಯ ಮೇಲಿಡಿ. ಇದು ಆರಿದ ನಂತರ ರುಬ್ಬಿಕೊಳ್ಳಿ. ಈಗ ಕಲಸಿದ ಹಿಟ್ಟನ್ನು ನಾದಿಕೊಂಡು, ತೆಳ್ಳಗೆ ಪೂರಿ ಅಳತೆಯಂತೆ ಲಟ್ಟಿಸಿಕೊಂಡು, ಅದರ ಮಧ್ಯೆ ತುಸು ಹೂರಣವಿಟ್ಟು ಕಡಬಿನ ಆಕಾರಕ್ಕೆ ಮಡಚಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಒಲೆಯ ಮೇಲಿಡಿ. ನೀರು ಕುದಿಯುವಾಗ ತಯಾರಿಸಿಟ್ಟುಕೊಂಡ ಕಡಬುಗಳನ್ನು ನೀರಿನಲ್ಲಿ ಬಿಡಿ. 5 ನಿಮಿಷ ಬೆಂದ ನಂತರ ತೆಗೆದು ತಟ್ಟೆಯಲ್ಲಿಡಿ. ಘಮಘಮಿಸುವ ತುಪ್ಪ ಹಾಕಿಕೊಂಡು ಸವಿಯಿರಿ.
 
ರವೆ ಉಂಡೆ
ಬೇಕಾಗುವ ಪದಾರ್ಥಗಳು: 100 ಗ್ರಾಂ ಸಣ್ಣ ರವೆ. 250 ಮಿಲಿ ಹಾಲು, (ಕಾಯಿಸಿ ಕೆನೆ ತೆಗೆದಿರಬೇಕು), 1/4 ಕಪ್ ತುಪ್ಪ, 1/2 ಕಪ್ ಸಕ್ಕರೆ (ಪುಡಿ ಮಾಡಿರಬೇಕು), ಏಲಕ್ಕಿ ಪುಡಿ, ಒಣದ್ರಾಕ್ಷಿ, ಕೊಬ್ಬರಿ ತುರಿ.
ತಯಾರಿಸುವ ವಿಧಾನ:
ತಳ ಗಟ್ಟಿಯಿರುವ ಬಾಣಲೆಯಲ್ಲಿ ರವೆಯನ್ನು ಘಂ ಎನ್ನುವಂತೆ ಚೆನ್ನಾಗಿ ಹುರಿದುಕೊಳ್ಳಬೇಕು. ಇದಕ್ಕೆ ತುಪ್ಪ ಮತ್ತು ಹಾಲು ಬೆರೆಸಿ ಈ ಮಿಶ್ರಣ ಗಟ್ಟಿಗೊಳ್ಳುವವರೆಗೂ ತಿರುಗಿಸುತ್ತಲೇ ಇರಬೇಕು. ಏಲಕ್ಕಿ ಪುಡಿ, ಸಕ್ಕರೆ ಬೆರೆಸಿ ಬಾಣಲೆಯನ್ನು ಒಲೆಯಿಂದ ಕೆಳಗೆ ಇಳಿಸಬೇಕು. ನಂತರ ಒಣದ್ರಾಕ್ಷಿ ಮತ್ತು ಕೊಬ್ಬರಿ ತುರಿಯನ್ನು ಈ ಮಿಶ್ರಣಕ್ಕೆ ಬೆರೆಸಿ ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಬೇಕು. ಈಗ ಗಣಪನಿಗೆ ರುಚಿರುಚಿಯಾದ ರವೆ ಉಂಡೆ ರೆಡಿಯಾಗಿದೆ.

LEAVE A REPLY

Please enter your comment!
Please enter your name here