ಹದಿಹರೆಯದ ಹುಡುಗಿಯರ ಸಬಲೀಕರಣಕ್ಕೆ ಜಾಗೃತಿ ಅಗತ್ಯ

0
482

 
ಉಜಿರೆ ಪ್ರತಿನಿಧಿ ವರದಿ
ಜಗತ್ತಿನಾದ್ಯಂತ ಹದಿಹರೆಯದ ಹುಡುಗಿಯರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹದಿಹರೆಯದ ಹುಡುಗಿಯರ ಸಬಲೀಕರಣದಿಂದ ಅವರು ತಮ್ಮ ಸಮುದಾಯದಲ್ಲಿ ಧನಾತ್ಮಕ ಬದಲಾವಣೆ ತರುವ ಪ್ರತಿನಿಧಿಗಳಾಗುವರು. ತಮ್ಮ ಜೀವನ ಹಾಗೂ ಆರೋಗ್ಯದ ಬಗ್ಗೆ ತಿಳುವಳಿಕೆ ಮಟ್ಟವನ್ನು ಹೆಚ್ಚಿಸಿಕೊಂಡು ತಾವು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಪಡೆದುಕೊಂಡಾಗ ಸಮ ಗ್ರಅಭಿವೃದ್ದಿ ಸಾಧ್ಯ. ಹದಿಹರೆಯದ ಹುಡುಗಿಯರ ಅದರಲ್ಲೂ ಬಡ, ಶಾಲೆಗೆ ಹೋಗದ, ಶೋಷಿತ ಹಾಗೂ ಹಾನಿಕಾರಕ ಮೂಡನಂಬಿಕೆಗಳಿರುವ ಹದಿಹರೆಯದ ಹುಡುಗಿಯರ ಜಾಗೃತಿಗಾಗಿ ಸಮುದಾಯ ಮಟ್ಟದಲ್ಲಿ ಕಾರ್ಯಕ್ರಮಗಳ ಅಗತ್ಯಇದೆಎಂದು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಜೋಸೆಫ್ ಅಭಿಪ್ರಾಯಪಟ್ಟರು.
 
 
ಪ್ರೊ.ಜೋಸೆಫ್ ಅವರು ಉಜಿರೆಯ ಶ್ರೀ.ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ಸಂಘದ ವತಿಯಿಂದ ವಿಶ್ವಜನಸಂಖ್ಯಾ ದಿನಾಚರಣೆ ಅಂಗವಾಗಿ ಆಯೋಜಿತವಾದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ವಿಧ್ಯಾರ್ಥಿಗಳಾದ ಅಭಿಜ್ಞಾ, ಮಹಿಮಾ, ಸಿಂಧೂ, ಕಿಶೋರ್ ಕುಮಾರ್, ಪ್ರೀತಿ ಭಟ್ ಅವರು ಜನಸಂಖ್ಯಾ ಸ್ಪೋಟದ ಕಾರಣ ಹಾಗೂ ಪರಿಣಾಮಗಳ ಬಗ್ಗೆ ಪ್ರಬಂಧ ಮಂಡಿಸಿದರು.
 
 
ಮಂಗಳೂರಿನ ಸರಕಾರಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಪುರುಶೋತ್ತಮ ಭಟ್ ಅವರು ಮಾತನಾಡುತ್ತಾ ಜನಸಂಖ್ಯೆಯನ್ನುಮಾನವ ಸಂಪತ್ತು ಆಗಿ ಪರಿವರ್ತಿಸುವ ಮೂಲಕ ಅಭಿವೃದ್ದಿಯನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಯಕುಮಾರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನುಕು.ಆಸ್ರತ್ ನಿರ್ವಹಿಸಿದರು. ಪ್ರಾಧ್ಯಾಪಕ ನಾಗರಾಜ್ ಸ್ವಾಗತಿಸಿದರು. ಪ್ರೊ.ಗಣರಾಜ್ ಅವರು ವಂದಿಸಿದರು.

LEAVE A REPLY

Please enter your comment!
Please enter your name here