‘ಹತ್ತು ಪ್ರಮುಖ ಸಮಾಜಮುಖೀ ಯೋಜನೆ ‘

0
11415


ಮೂಡುಬಿದಿರೆ: ಪ್ರಸಕ್ತ ಸಾಲಿನಲ್ಲಿ ಹತ್ತು ಪ್ರಮುಖ ಸಮಾಜಮುಖೀ ಯೋಜನೆಯನ್ನು ಅನುಷ್ಠಾನಗೊಳಿಸಲು ರೂಪಿಸಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಮೂಡುಬಿದಿರೆಯ ನೂತನ ಅಧ್ಯಕ್ಷ jw.ಪಿಂಟೋ ಪ್ರಕಟಿಸಿದರು.
ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಮಾಜದಲ್ಲಿ ಅತ್ಯಂತ ಕಡುಬಡತನದಲ್ಲಿರುವ ೧೩ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲುದ್ದೇಶಿಸಿದ್ದೇವೆ.ಮೂಡುಬಿದಿರೆಗೆ ಅತ್ಯವಶ್ಯಕವಾಗಿ ಬೇಕಾಗಿರುವ ಡಯಾಲಿಸಿಸ್ ಯಂತ್ರವನ್ನು ಸಮರ್ಪಕವಾಗಿ ಆಸ್ಪತ್ರೆಯೊಂದರ ಸಹಯೋಗದೊಂದಿಗೆ ಲೋಕಾರ್ಪಣೆಗೊಳಿಸಲಿದ್ದೇವೆ. ಪಪ್ಪಾಯಿ ಹಾಗೂ ನುಗ್ಗೆಯ ಒಂದು ಸಾವಿರ ಗಿಡಗಳನ್ನು ಶಾಲಾ ಮಕ್ಕಳ ಮೂಲಕ ವಿತರಿಸುವ ಕಾರ್ಯವಾಗುತ್ತಿದೆ, ನಾಲ್ಕು ಸೋಲಾರ್ ದಾರಿ ದೀಪಗಳ ಅಳವಡಿಕೆ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಹೆಣ್ಣುಮಕ್ಕಳ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹವೂ ಸೇರಿದಂತೆ ಅನೇಕ ಸಮಾಜಮುಖೀ ಯೋಜನೆ ರೂಪಿಸಲುದ್ದೇಶಿಸಿರುವುದಾಗಿ ತಿಳಿಸಿದರು.
ಪದಗ್ರಹಣ: ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮೂಡುಬಿದಿರೆಯ ನಿಶ್ಮಿತಾ ಟರ‍್ಸ್ನಲ್ಲಿರುವ ಪ್ಯಾರಡೈಸ್ ಸಭಾಂಗಣದಲ್ಲಿ ಜುಲೈ ೧೨ರ ಸಾಯಂಕಾಲ ೫ಗಂಟೆಗೆ ನಡೆಯಲಿದೆ. ರೊಟೇರಿಯನ್ ಡಾ.ಭಾಸ್ಕರ್ ಎಸ್, ರೊ.ಸುರೇಂದ್ರ ಕಿಣಿ, ಡಾ.ಮಹಾವೀರ ಜೈನ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಕೊರೊನಾ ವಾರಿರ‍್ಸ್ಗಳಿಗೆ ಗೌರವಾರ್ಪಣೆ, ನೂತನ ಯೋಜನೆಗಳ ಉದ್ಘಾಟನೆ ಇದೇ ಸಂದರ್ಭ ನಡೆಯಲಿದೆ ಎಂದರು. ರೋಟರಿ ನೂತನ ಕಾರ್ಯದರ್ಶಿ ಡಾ.ಆಶೀರ್ವಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here