ಹಣ ಸಾಗಿಸುತ್ತಿದ್ದ ವಾಹನ ನಾಪತ್ತೆ

0
273

ಬೆಂಗಳೂರು ಪ್ರತಿನಿಧಿ ವರದಿ
ಬ್ಯಾಂಕ್ ಗೆ ಹಣ ಸಾಗಿಸುತ್ತಿದ್ದ ವಾಹನ ನಾಪತ್ತೆಯಾದ ಘಟನೆ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ನಡೆದಿದೆ. 1 ಕೋಟಿ 37 ಲಕ್ಷ ಹಣದೊಂದಿಗೆ ಚಾಲಕ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಹಣ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ್ದಾಗಿದೆ.
 
 
ವಾಹನದಲ್ಲಿ ಹೊಸ ನೋಟುಗಳಾದ 500, 1000 ರೂಪಾಯಿ ನೋಟುಗಳಿದ್ದವು. ಬ್ಯಾಂಕ್ ಸಿಬ್ಬಂದಿ, ಸೆಕ್ಯುರಿಟಿಗಾರ್ಡ್ ಬ್ಯಾಂಕ್ ಗೆ ತೆರಳಿದ್ದು, ಚಾಲಕ ಬ್ಯಾಂಕ್ ಒಳಗೆ ಪ್ರವೇಶಿಸದೆ ವಾಹನ ಸಮೇತ ಪರಾರಿಯಾಗಿದ್ದಾನೆ.
 
 
ವಾಹನ ನಗರದಿಂದ ಹೊರಹೋದಂತೆ ಕಣ್ಗಾವಲು ಹಾಕಲಾಗಿದೆ. ನಗರದಾದ್ಯಂತ ಪೊಲೀಸ್ ರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.  ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನೆಯಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
 
 
 
ಪರಾರಿಯಾದ ವಾಹನ ಚಾಲಕ ಗುತ್ತಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹಣ ತುಂಬಿದ ವಾಹನ ಲಾಗಿ ಕ್ಯಾಶ್ ಸೆಕ್ಯುರಿಟಿ ಏಜೆನ್ಸಿಗೆ ಸೇರಿದ್ದಾಗಿದೆ.
 
 
ಆದ್ರೆ ಹಣದ ವಾಹನ ನಾಪತ್ತೆ ಬಗ್ಗೆ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ನಿರಾಕರಿಸಿದ್ದಾರೆ. ನಮ್ಮ ಬ್ಯಾಂಕ್ ಗೆ ಸೇರಿದ ಯಾವುದೇ ವಾಹನ ನಾಪತ್ತೆಯಾಗಿಲ್ಲ ಎಂದು ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

LEAVE A REPLY

Please enter your comment!
Please enter your name here