ಹಣದ ಸುತ್ತಾ ನಮ್ಮೀ ಪಯಣ!

0
366

ಮಸೂರ: ಆರ್ ಎಂ ಶರ್ಮ
ಹಣ ಎಂದರೆ ಹೆಣವೂ ಬಾತಿ ಬಿಡುತ್ತದೆ-ಇದು ಕನ್ನಡದ ಲೋಕಪ್ರಸಿದ್ಧವಾದ ಗಾದೆ ಮಾತು.
ಹಣ ಸವ೯ಶಕ್ತ,ಸವಾ೯ಂತಯಾ೯ಮಿ,ಸವ೯ಜ್ನ~!
ಅಂದರೆ ಫಲಶೃತಿ ಹಣವೇ ಪರಾತ್ಪರ.
“ಕ್ರಿಯಾ ಸಿದ್ಧಿ ಸತ್ವೇ ವಸತಿ ಮಹತಾಮ್ ನೋಪಕರಣೇ!”-ಇದು ಸುಭಾಷಿತಕಾರನ ಉದ್ಗಾರ.
ಹಣವೇ ಮಹತಿ ಎಂತಾದರೆ ಅದು ಸತ್ವ-ಸತ್ಯ-ತಥ್ಯ ಇನ್ನೆಲ್ಲಾ ಮಿಥ್ಯ.
ಒಂದೊಮ್ಮೆ ಹಣ ಮಹತಿಯದಲ್ಲ ಎಂದರೆ ಅದು ಸತ್ವಕ್ಕೆ ಬದಲಿಗೆ ಉಪಕರಣ-“ಟೂಲ್”-ಎಂತಾಯಿತು.
ಉಪಕರಣದ ಯಾಥಾಥ್ಯ೯ ಉತ್ತೋಮೊತ್ತಮ ಕಾಯ೯ಕ್ಷಮತೆ.
ಕಾಯ೯ಕ್ರಮದ ಜಯ-ಪ್ರಸನ್ನತೆ-ಪ್ರಭುದ್ಧತೆ-ಪ್ರಾವಿಣ್ಯತೆ.
” ಉದ್ಯೋಗಪುರುಷಸಿಂಹಂ ಉಪೈತಿ ಲಕ್ಶ್ಮೀ”,
“ಕಾಂಚಾಣಂ ಕಾಯ೯ಸಿದ್ಧಿಃ”,
“ಸವೇ ೯ಗುಣಾಃ ಕಾಂಚಾಣಮ್ ಆಶ್ರಯತಿ:
“ಅಥಾ೯ಥಿ೯ ಚಾಪ್ನುಯಾತ್ ಅಥ೯ಂ”
ಇವೆಲ್ಲದರ ಸಾರ ಹಣವೇ ಸರದಾರ.
ಈಗನೋಡಿ ಹಣಸಂಪಾದನೆ-ಉದ್ಯೋಗ ಸುಲಕ್ಷಣ.
ಸಂಪಾದನೆಗೆ ಅವಲಕ್ಷಣಗಳಿಲ್ಲವೇನು?
ಇವೆ-ಹೇರಳವಾಗಿ.
ಹಣವಂತರನ್ನು ಕೊಳ್ಳೆ ಹೊಡೆಯುವುದು,ಕೊಲೆ ಮಾಡುವುದು,ಕದ್ದೊಯ್ಯುವುದು.
ಹಣಪಡೆದು ಕೊಲೆ-ಉದ್ಯೋಗ-“ಸುಪಾರಿ ರೋಗ!”
ಹಣಕ್ಕಾಗಿ-ಮಾಡಬಾದ್ದನ್ನು ಮಾಡುವುದು.
ಮಾದಬೇಕದ್ದನ್ನು ಮಾಡದಿರುವುದು.
ಮಾಡಿದ್ದನ್ನು ಮರೆಮಾಚುವುದು, ಮರೆಮಾಚಿದ್ದನ್ನು ಮಾಡುವುದು ಇವೆಲ್ಲಾ ಹಣಕ್ಕಾಗಿಯೇ ವಿನಃ ಮತ್ತೇನಿಲ್ಲ.
ಈಗ ನೋಡಿ,ಹಣವಂತರ ಸಂತಾನ-ಐಷಾರಮಕ್ಕೆ-ವಿಹಾರ,ವಿನೋದ,ವಿರೋಧ ಕೊನೆಗೆ ಹಣಬಲದಿಂದ,ತೋಳ್ಬಲದಿಂದ ಅವ್ಯವಹಾರ-ಈ ಉಪಾಹಾರ-ಅಪಾರ-ಅಪಾಯ-ಅಡಿಪಾಯ ಮಾಯ.
ಬೆಲೆಬಾಳುವ ವಾಹನ,ವೆಗ್ಗಿಲ್ಲದ ವೇಗ,ಒಗ್ಗದ ವೇಳೆ,ಹೆಂಡ,ಹೆಣ್ಣು ಅಮಲಿಗೆ ಸೋಪಾನ ನದೆದೇ ಹೋಯಿತು-ಹೋಗುತ್ತದೆ ಅಚಾತುಯ೯.
ಅಚಾತುಯ೯ದ ಗೌರೀಶಂಕರ-ತುಟ್ಟತುದಿ-ಹೆಣದ ದಿಬ್ಬಣ.
ಅಶಕ್ತರ,ಅಮಾಯಕರ,ನಿಗ೯ತಿಕರ,ವಿರೋಧಿಗಳ,ವಿಚಾರವಾದಿಗಳ ಮಾರಣ ಹೋಮ-ಇದೇ ನೇಮ-ನಿಯಮ ಇನ್ನೆಲ್ಲಿ ಸಂಯಮ?
ಸಮ್ಯಮವಿಲ್ಲದಮೇಲೆ ಯಮ-ಅಲ್ಲಿಗೆ ಎಲ್ಲಾ ನಿನಾ೯ಮ.
ಸಂತಾನ ತನ್ನ ಮೋಜಿಗೆ-ಅನ್ಯ,ಅನನ್ಯ,ಅನ್ಯೋನ್ಯ ಸಂತಾನಗಳಿಗೆ ಅಂತಕ-ಆತಂಕ-ಕಳಂಕ.
ಇದೇಹಣದ ಹಣವಂತರ ಅಂತಯ೯.
ಹಾಗಂತ ಎಲ್ಲಾ ಹಣವಂತರ ಹಣೆ ಬರಹವಿದಲ್ಲ.
ಒಟ್ಟಿನಲ್ಲಿ-ಹಣವಿದ್ದಾಗ ವಿವೇಕದ ಕೊರತೆ ಖಂಡಿತವಾಗಿಯೂ ಚಚಾ೯ಹ೯ವೇ ಸರಿ.
ಭಾರತದ ಉದ್ದಗಲಕ್ಕೆಹಣದ-ಹಣವಂತರ-ಸಂಸಾರದ ಎಗ್ಗಿಲ್ಲದ ಸಂತಾನ ಶ್ರೀಗಳು-ಲಿಮ್ಗಭೇದವಿಲ್ಲದೇ ಎಸಗುವ,ಎಸಗಿಸುವ ಅಕಾಯ೯ಗಳೇ ಮಾದ್ಯಮಗಳಿಗೆ ನಿತ್ಯದ ಸುಗ್ರಾಸ.
ಇಲ್ಲಿ ಸಾಹಸ,ಸಹವಾಸ,ಸಂಭ್ರಮ ಇವೆಲ್ಲಾ ಪರಮೋಚ್ಚವೇ.
ಕೆಟ್ತದನ್ನು ಮಾಡು,ಮಾಡಿಸು-ತದನಂತರ ಓಡು-ಸತ್ಯದ ಪರೀಕ್ಷೆ ಬಂದಾಗ ಝಾಢಿಸು ಇದೇ ಐತಿಹ್ಯ.
ಪೀಡಿತರ,ಶೋಷಿತರ,ಬಾಧಿತರ-ಆಕ್ರೋಶ,ಆಕ್ರಂದನ ಎಲ್ಲ ಗಗನಕ್ಕೆ.
ಗಮನ,ಗಹನ ಎಲ್ಲಾ ಪ್ರಹಸನ-ಹಾಗಾಗಿ ಪಾತಾಳಕ್ಕೆ.
ಗಗನಕ್ಕೂ-ಪಾತಳಕ್ಕೂ-“ಭೂಮ್ಯಾಕಾಶದ ಅಂತರ-ಇದು ನಿರಂತರ-ಪರಂಪರ
ಅರಣ್ಯ ರೋದನ-ಅದಮ್ಯ ಚೇತನ-ಸಾಂತ್ವನ-ಸಮಾಧಾನ ಎಲ್ಲಾ ಸಮಾಧಿ.
ನೆಮ್ಮದಿ ನಿನಾ೯ಮ-ಬೇಗುದಿ ಬಂಗಾರ.
ಹಣ ಹೆಣವಾಗಿಸಿತು,ಹೈರಾಣವಾಗಿಸಿತು-ಆದರೂ ಹಣದ ಬೆನ್ನಟ್ಟಿ ಹೋಗುವುದು ನಿಲ್ಲಲಿಲ್ಲ-ನಿಲ್ಲಿಸಲ್ಪಡಲಿಲ್ಲ.
ಪ್ರಭು-ವಿಭು-ಎಲ್ಲಾ ಗಬ್ಬು ಮಬ್ಬು-ಕೊಬ್ಬು ಈಗ ನಿಬ್ಬರಗಾಗಿಸಿತು.
“ಜಗನ್ಮಿಥ್ಯ-ಬ್ರಹ್ಮಸತ್ಯ”-ಎಂಬ ವೇದಾತದ ಮಾತಿಗೆ-ಮಿಥ್ಯದ ಜಗದಲ್ಲಿ-ಸತ್ಯದ ಶೋಧದಲ್ಲಿ ಜೀವ-ಜಾಳು-ಪಾಳು-ಪಾಲು.
ಜೀವವಿಲ್ಲ-ಜೀವಿ ಇಲ್ಲ ಆದರೂ ಜೀವನ.
ಈ ಜೀವನಕ್ಕೆ ಭಗವಂತನಲ್ಲಿ ಅರಿಕೆ ನಿತ್ಯ ಕಮ೯ಗಳ ವ್ಯವಹಾರಗಳಲ್ಲಿ-
“ನಂದಾಮ ಶರದಶ್ಶತಂ”,
“ಮೋದಾಮ ಶರದಶ್ಶತಂ”,
“ಪ್ರಬ್ರುವಾಮ ಶರದ್ದಶ್ಶತಂ”,
ಇದೇ ಈನಮ್ಮ ಪಯಣದ ಪ್ರಸ್ತುತಿಯ ಫಲಶೃತಿ!
ಓದುಗ ಮಹನೀಯರು,ಮಹಾಮಹಿಮರು ಚಚಿ೯ಸಲಿ,ಚಿಂತಿಸಲಿ,ಮಂಥಿಸಲಿ-
ಸುಭಾಷಿತಕಾರನ ಮಾತಿನ ಸಾರ-“ಜೀವೇ ವಾರಿತರಂಗ ಬುದ್ಬುದ ಸಮಯೇ ಸೌಖ್ಹ್ಯಂ ಕುತಃ ಪ್ರಾಣಿನಾಂ?”-ಇದು ಪ್ರಸ್ತುತವೇ-ಅಪ್ರತಸ್ತತವೇ ಎಂತ.
ಅಲ್ಲಿಗೆ ಎಲ್ಲಾ ಸಂದಿತು-ಸಾಧುವಾಯಿತು,ಸಿಂಧುವಾಯಿತು,ಸಿದ್ಧವಾಯಿತು.
ಈ ಸಿದ್ಧವೇ-ಸಿದ್ಧಾಂತ-ಇನ್ನೆಲ್ಲಿ ರಾದ್ಧಾಂತ?
ಸುಖಾಂತ ದುಃಖಾಂತ ಇದೆಲ್ಲಾ ಪರಮಾತ್ಮನ ಸ್ವಂತ.
ಆರ್ ಎಂ ಶಮ೯,
ಮಂಗಳೂರು
[email protected]

LEAVE A REPLY

Please enter your comment!
Please enter your name here