ಹಣದುಬ್ಬರ ಏರಿಕೆ

0
428

ರಾಷ್ಟ್ರೀಯ ಪ್ರತಿನಿಧಿ ವರದಿ
ಇಂದು ಹಣದುಬ್ಬರ ಅಂಕಿ-ಅಂಶಗಳು ಪ್ರಕಟವಾಗಿದೆ. ಜುಲೈ ನಲ್ಲಿ ಶೇ.3.55 ರಷ್ಟಿದ್ದ ಸಗಟು ದರ ಆಧಾರಿತ ಹಣದುಬ್ಬರ ಆಗಸ್ಟ್ ನಲ್ಲಿ ಶೇ.3.74 ಕ್ಕೆ ಏರಿಕೆಯಾಗಿದೆ.
 
 
ಕೆಲವು ಪದಾರ್ಥಗಳ ಹಣದುಬ್ಬರ ಇನ್ನೂ ಏರಿಕೆಯ ಸ್ಥಿತಿಯಲ್ಲೇ ಇದ್ದು, ಆಲೂಗಡ್ಡೆ ಬೆಲೆ ಶೇ.66.72 ಧಾನ್ಯಗಳ ಬೆಲೆ ಶೇ.34.55 ಹಣ್ಣುಗಳ ಬೆಲೆ ಶೇ.13.91 ರಷ್ಟು ಏರಿಕೆಯಾಗಿದೆ. ಆದರೆ ಕಳೆದ ವರ್ಷ ಆಗಸ್ಟ್ ಗೆ ಹೋಲಿಕೆ ಮಾಡಿದರೆ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಈರುಳ್ಳಿ ಬೆಲೆ ಮಾತ್ರ ಶೇ.64.19 ರಷ್ಟು ಇಳಿಕೆಯಾಗಿದೆ.
 
 
ಇನ್ನು ಉತ್ಪಾದಿತ ಸರಕುಗಳು ಹಾಗೂ ಇಂಧನದ ವಾರ್ಷಿಕ ಹಣದುಬ್ಬರ ಮಧ್ಯಮ ಸ್ಥರದಲ್ಲಿದ್ದು ಅನುಕ್ರಮವಾಗಿ ಶೇ.2.42 ಹಾಗೂ 1.62 ರಷ್ಟಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here