ಹಣಕಾಸಿನ ಮೂಲ

0
347

ಮುಂದುವರಿದ ಭಾಗ…
ಕಾರ್ಯಕ್ರಮ ಸಂಘಟನೆ
ಶಿಕ್ಷಣ ಚಿಂತನೆ ಅಂಕಣ: ಅರವಿಂದ ಚೊಕ್ಕಾಡಿ
ಯಾವುದೇ ಕಾರ್ಯಕ್ರಮವನ್ನು ನಡೆಸಬೇಕಾದರೆ ಹಣಕಾಸಿನ ಮೂಲ ಇರಲೇ ಬೇಕಾಗುತ್ತದೆ. ಕಾರ್ಯಕ್ರಮವನ್ನು ನಡೆಸುವ ಸಂಘಟನೆಯೇ ಹಣ ಸಂಪಾದನೆಯನ್ನು ಮಾಡುವಂತಹದಾಗಿದ್ದರೆ ಹಣಕಾಸಿನ ಸಮಸ್ಯೆ ಬರುವುದಿಲ್ಲ. ಉಳಿದ ಸಂಘಟನೆಗಳಿಗೆ ಹಣಕಾಸಿನ ಪ್ರಶ್ನೆ ಬರುತ್ತದೆ. ಈ ಬಗ್ಗೆ ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
 
* ಕಾರ್ಯಕ್ರಮಕ್ಕೆ ತಗಲವಾದ ಅಂದಾಜು ವೆಚ್ಚದ ಬೆಜಟ್ಟನ್ನು ಮೊದಲು ತಯಾರಿಸಿಕೊಳ್ಳಬೇಕು. ಆ ಬಜೆಟ್ ನಲ್ಲಿ ಸಂಘಟನೆಯ ತನ್ನ ಬಳಿ ಇರುವ ಹಣದಲ್ಲಿ ಎಷ್ಟನ್ನು ಹೊಂದಿಸಿಕೊಳ್ಳಬಲ್ಲದೆಂದು ಯೋಚಿಸಬೇಕು. ಇನ್ನಷ್ಟು ಹಣ ಬೇಕಾಗಿದ್ದರೆ ಸಂಘಟನೆಯ ಯಾವ ಸದಸ್ಯರು ಎಷ್ಟು ಹಣವನ್ನು ಭರಿಸಬಲ್ಲರು ಎಂದು ಯೋಚಿಸಬೇಕು. ಅದನ್ನು ಸಂಗ್ರಹಿಸಬಾರದು ಕಾದಿರಿಸಿದ ನಿಧಿಯೆಂದು ಭಾವಿಸಬೇಕು. ಯಾವ ಮೂಲದಿಂದಲೂ ಹಣವನ್ನು ಹೊಂದಿಸಲು ಆಗದೆ ಇದ್ದಾಗ ಬಳಸಲು ಇರುವ ವ್ಯವಸ್ಥೆ ಇದಾಗಿರುತ್ತದೆ.
 
* ಹೆಚ್ಚುವರಿ ಹಣವನ್ನು ಹೊಂದಿಸಲು ಯೋಜನೆಯನ್ನು ರೂಪಿಸಬೇಕು. ಶುಲ್ಕರಹಿತ ಪ್ರದರ್ಶಗಳು, ಲಕ್ಕಿಡಿಪ್ ಅಥವಾ ಇಂತಹ ಇನ್ನಿತರ ಕಾರ್ಯಕ್ರಮಗಳ ಮೂಲಕ ಹಣ ಹೊಂದಿಸುವ ಬಗ್ಗೆ ಯೋಚಿಸಿ ಸೂಕ್ತವೆನಿಸಿದರೆ ಅನುಷ್ಠಾನಗಗೊಳಿಸಬೇಕು.
 
* ವಂತಿಗೆಯೂ ಕೂಡ ಹಣಕಾಸು ಹೊಂದಾಣಿಕೆಯ ಒಂದು ಪ್ರಮುಖ ಮೂಲವಾಗಿರುತ್ತದೆ. ಸಂಘಟನೆಗೆ ನಿಕಟವಾದ ಹಣಕಾಸಿನಲ್ಲಿ ಸ್ಥಿತಿವಂತರಾದ ಜವಾಬ್ದಾರಿಯುತ ನಾಗರಿಕರನ್ನು ಗುರುತಿಸಿಕೊಳ್ಳಬೇಕು. ಅವರಲ್ಲಿ ಕೂಡ ಎಲ್ಲರ ಬಳಿಯೂ ಹೀಗೆ ಕೇಳುವುದಿಲ್ಲ. ಉದ್ದೇಶಿತ ಕಾರ್ಯಕ್ರಮದ ಬಗ್ಗೆ ಆಸಕ್ತಿ ಇರುವವರಲ್ಲಿ ಕೇಳಬೇಕು.
* ಸಾಧ್ಯವಾದಷ್ಟು ಸಾರ್ವಜನಿಕ ವಂತಿಗೆ ಮಾಡಲು ಹೋಗಬಾರದು. ತೀರಾ ಅನಿವಾರ್ಯವಾದರೆ ಸಾರ್ವಜನಿಕ ವಂತಿಗೆಯನ್ನು ನಡೆಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
1. ದೈನಂದಿನ ಜೀವನಕ್ಕೆ ಕಷ್ಟಪಡುತ್ತಿರುವವರಲ್ಲಿ ವಂತಿಗೆ ಮಾಡುವಂತೆ ಕೇಳಬಾರದು.
2. ಕಾರ್ಯಕ್ರಮದ ಬಗ್ಗೆ ಆಸಕ್ತಿ ಇಲ್ಲದವರಲ್ಲಿ ವಂತಿಗೆ ಕೇಳಬಾರದು.
3. ವಂತಿಗೆ ಕೇಳಲು ವೈಯಕ್ತಿಕ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಳ್ಳಬಾರದು.
4. ವಂತಿಗೆ ಕೊಡಲು ಕನಿಷ್ಠ ಮೊತ್ತವನ್ನು ನಿಗದಿಪಡಿಸಬಾರದು.
5. ವಂತಿಗೆಯನ್ನು ಪಡೆಯುವ ಮೊದಲು ನಿಮ್ಮ ಉದ್ದೇಶವನ್ನು ವಂತಿಗೆ ಕೊಡುವವರಿಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕು.
* ಸಂಘಟನೆಯ ಕಾರ್ಯಕ್ರಮಕ್ಕೆ ವೈಯಕ್ತಿಕ ಹಣವನ್ನು ಬಳಸುವ ಮನಸ್ಸಿದ್ದರೆ ಅದನ್ನು ಎಲ್ಲ ಸದಸ್ಯರ ಗಮನಕ್ಕೆ ತಂದ ನಂತರವೇ ಬಳಸಬೇಕು.
 
* ಸಂಗ್ರಹಿಸಿದ ಹಣವನ್ನು ಸಮರ್ಪಕವಾಗಿ ಎಚ್ಚರಿಕೆಯಿಂದ ಬಳಸಬೇಕು. ಹಣದ ಬಳಕೆಯ ಪಾರದರ್ಶಕವಾಗಿದ್ದು ಯಾವ ರೀತಿಯಲ್ಲಿ ಯಾವ ಉದ್ದೇಶಕ್ಕಾಗಿ ಖರ್ಚಾಗಿದೆ ಎಂಬುದನ್ನು ತಿಳಿಸಬೇಕು.
* ಸಂಘಟನೆಗಳು ಸ್ವಂತ ಆದಾಯವನ್ನು ಹೊಂದುವ ಚಟುವಟಿಕೆಗಳನ್ನು ರೂಪಿಸಬೇಕು.
* ಸಂಘಟನೆಯ ಖರ್ಚು ವೆಚ್ಚಗಳ ದಾಖಲೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು.
 
ಅರವಿಂದ ಚೊಕ್ಕಾಡಿ
[email protected]
ಮುಂದುವರಿಯುವುದು…

LEAVE A REPLY

Please enter your comment!
Please enter your name here