ಬೆಂಗಳೂರು ಪ್ರತಿನಿಧಿ ವರದಿ
ಹಜ್ ಯಾತ್ರಿಕರಿಗೆ ಸಹಾಯ ಧನ ಇಲ್ಲ ಎಂದು ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್ ರೋಷನ್ ಬೇಗ್ ಅವರು ರಾಜ್ಯ ವಿಧಾನ ಸಭೆಯಲ್ಲಿ ಮಂಗಳವಾರ ಪ್ರಕಟಿಸಿದರು.
ಹಜ್ ಭವನದಲ್ಲಿ ಯಾತ್ರಿಕರಿಗೆ ಆತಿಥ್ಯ ವೆಚ್ಚಕ್ಕಾಗಿ 1.55 ಕೋಟಿ ರೂ ಖರ್ಚ ಮಾಡಲಾಗಿದೆ. ಹಜ್ ಭವನದಲ್ಲಿ ವಸತಿ ಸೌಲಭ್ಯ ಒದಗಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಪಾಸ್ಪೋರ್ಟ್ ಮತ್ತು ವೀಸಾ ಪಡೆಯಲು ಮಾರ್ಗದರ್ಶನ ನೀಡಲಾಗುವುದು. ಹಜ್ ಯಾತ್ರೆಗೆ ಆಯ್ಕೆಯಾಗದವರಿಗೆ ಮುಂದಿನ ಹಜ್ ಯಾತ್ರೆಗೆ ಅರ್ಜಿ ಹಾಕಲು ಸಲಹೆ ಕೊಡಲಾಗುವುದು. ಸತತವಾಗಿ ನಾಲ್ಕು ಬಾರಿ ಅರ್ಜಿ ಹಾಕಿ ಅವಕಾಶ ದೊರೆಯದೇ ಇರುವ ಯಾತ್ರಿಕರಿಗೆ ಖುರ್ರಾ ಲಾಟರಿ ಪ್ರಕ್ರಿಯೆ ಮೂಲಕ ಯಾತ್ರೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.