ಹಗ್ಗದಮೇಲೆ ಮಲಗಿದ ಅವಧೂತ್!

0
483

ನಿತ್ಯ ಅಂಕಣ:21

ಭಕ್ತನಾದ ರಾಘವನ್ ಮನೆಯಲ್ಲಿ ನಿತ್ಯಾನಂದ ಸ್ವಾಮಿಗಳು ಮೊಕ್ಕಾಂ ಮಾಡಿದ್ದರು. ಗುರುದೇವರಿಗೆ ಭಕ್ತಿಯಿಂದ ಎಲ್ಲಾ ರೀತಿಯಲ್ಲಿ ಉಪಚರಿಸಿದ ರಾಘವನು. ನಿತ್ಯಾನಂದ ಸ್ವಾಮಿಗಳಿಗೆ ರಾತ್ರಿ ಮಲಗಲು ಒಂದು ಕೋಣೆಯಲ್ಲಿ ಹಾಸಿಗೆ, ತಲೆದಿಂಬನ್ನು ಸಿದ್ದಪಡಿಸಿ ಇಟ್ಟಿದ್ದನು. ಅದರ ಪಕ್ಕದ ಕೋಣೆಯಲ್ಲಿ ತನಗೆ ಮಲಗಲು ಚಾಪೆ ಸಿದ್ದಪಡಿಸಿದ್ದ. ಮಲಗುವ ಮುನ್ನ ಗುರುದೇವರು ತನಗೊಂದು ಉದ್ದದ ಹಗ್ಗ ಬೇಕೆಂದು ರಾಘವನಲ್ಲಿ ಕೇಳುತ್ತಾರೆ. ರಾಘವನಿಗೆ ಅಚ್ಚರಿ ಆಗುತ್ತದೆ. ಏನಿದು..! ಸ್ವಾಮಿಗಳು ಹಗ್ಗ ಕೇಳುತ್ತಾರಲ್ಲ..! ಗುರುಗಳ ಬಳಿ ಯಾಕೇ..? ಎಂದು ಪ್ರಶ್ನಿಸಲು ರಾಘವನಿಗೆ, ಏನೋ ಭಯ ಕಾಡುತ್ತದೆ. ಹಾಗಾಗಿ ರಾಘವನು…ತಾನು ಕೇಳಿದರೆ ಅಧಿಕ ಪ್ರಸಂಗ ಆಗುತ್ತದೆ ಎಂದು, ಏನನ್ನು ಪ್ರಶ್ನಿಸಲು ಹೋಗುವುದಿಲ್ಲ.

ಮನೆಯಲ್ಲಿದ್ದ ಗಟ್ಟಿಯಾಗಿರುವ ಹಗ್ಗವನ್ನು ಹುಡುಕಿ ತಂದು ಗರುಗಳಿಗೆ ನೀಡುತ್ತಾನೆ. ಗುರುಗಳು ಹಗ್ಗವನ್ನು ಏನು ಮಾಡುತ್ತಾರೆ..! ಏನ್ನುವ ಕೂತುಹಲ ರಾಘವನಿಗಾಗುತ್ತದೆ. ಸ್ವಾಮಿಗಳು ರಾಘವ ನೀಡಿದ ಹಗ್ಗವನ್ನು ಒಂದು ಪಾರ್ಶ್ವದ ಗೋಡೆಯ ಕಿಟಕಿಯ ಸರಳಿಗೆ ಕಟ್ಟುತ್ತಾರೆ. ಮತ್ತೊಂದು ತುದಿಯ ಹಗ್ಗವನ್ನು ಎದುರುಗಡೆ ಗೊಡೆ ಕಿಟಕಿಯ ಸರಳಿಗೆ, ಬಿಗಿಯಾಗಿ ಎಳೆದು ಕಟ್ಟುತ್ತಾರೆ. ಗುರುದೇವರು ಮಾಡಿರುವ ಕೆಲಸ ಗಮನಿಸಿದ ರಾಘವನಿಗೆ ಏನೆಂದು ಅರ್ಥವಾಗುದಿಲ್ಲ. ಹಗ್ಗ ಕಟ್ಟಿಯಾದ ಬಳಿಕ ಗುರುದೇವರು ಸಿದ್ದಪಡಿಸಿರುವ ಹಾಸಿಗೆ ಮೇಲೆ ಮಲಗುತ್ತಾರೆ. ಗುರುಗಳು ಮಲಗಿದ ಬಳಿಕ ರಾಘವನು ಮಲಗಿಕೊಂಡ.

ನಡು ರಾತ್ರಿ ಸಮಯದಲ್ಲಿ ರಾಘವನು ನಿದ್ದೆಯಿಂದ ಎಚ್ಚರಗೊಳ್ಳುತ್ತಾನೆ. ಒಮ್ಮೆ ಗುರುದೇವರು ಮಲಗಿರುವ ಕೋಣೆಯತ್ತ ಕಣ್ಣಾಡಿಸುತ್ತಾನೆ. ಹಾಸಿಗೆಯ ಮೇಲೆ ಮಲಗಿರುವ ಗುರುದೇವರು ಅಲ್ಲಿ ಇರುವುದಿಲ್ಲ…! ಅವರು ಮಲಗುವ ಮೊದಲು ಸಿದ್ದಗೊಳಿಸಿದ ಹಗ್ಗದ ಮೇಲೆ ಮಲಗಿದ್ದರು. ಅಲ್ಲಿ ಪ್ರಭು ನಿತ್ಯಾನಂದರು ಗಾಢವಾದ ನಿದ್ದೆಯಲ್ಲಿ ಇದ್ದರು. ಜೋಕಾಲಿಯಂತೆ ಅವರು ಅಲುಗುತ್ತಿದ್ದರು. ಮನೆಯ ಜಗುಲಿಯ ಮೇಲೆ ಮಲಗಿದ್ದವರು ಹೊರಳಾಡಿ ಕೆಳಗೆ ಬೀಳುವರು ಇದ್ದಾರೆ. ಅಂಥಹದರಲ್ಲಿ ಗುರುದೇವರು ಹಗ್ಗದಲ್ಲಿ ಮಲಗಿದ್ದಾರೆಂದರೇ..! ಇದೊಂದು ಅದ್ಭುತ ಲೀಲೆ ಅನಿಸಿತು ರಾಘವನಿಗೆ. ತಾನು ಬೆಳಿಗ್ಗೆ ಬೇಗ ಎದ್ದೇಳ ಬೇಕು, ಮನೆ ಮಂದಿಗೆ ಗುರುದೇವರ ಪವಾಡ ತೋರಿಸ ಬೇಕೆಂದು ಯೋಚಿಸಿ ರಾಘವನು ಮಲಗಿದ.

ಆದರೆ ರಾಘವನಿಗೆ ಬೆಳಿಗ್ಗೆ ಯೋಚಿಸಿದ ಸಮಯದಲ್ಲಿ ಎದ್ದೇಳಲಾಗಲಿಲ್ಲ. ಅಷ್ಟೊಂದು ನಿದ್ದೆ ಅವನಿಗೆ ಬಂದಿರುತ್ತದೆ. ಗುರುದೇವರು ತೋರಿಸಿದ ಪವಾಡವನ್ನು ಮನೆ ಮಂದಿಗೆ ಹೇಳಲಷ್ಟೇ ಶಕ್ತನಾಗುತ್ತಾನೆ. ಇದು ಗುರುದೇವರು ತನ್ನ ಭಕ್ತನಿಗೆ ತೋರಿಸಿದ ಪವಾಡ ಅಷ್ಟೇ ಎಂದು ರಾಘವನಿಗೆ ಅನಿಸಿತು. ಭಕ್ತರಿಗೆ ನಂಬಿಕೆ ಧೃಢವಾಗಲು ಗುರುದೇವರು ಪವಾಡಲೀಲೆಗಳನ್ನು ತೊರ್ಪಡಿಸುತ್ತಿದ್ದರು. ಇಂತಹ ವಿಚಾರಗಳು ಪ್ರಾಜ್ಞರಿಗೆ ಮನ ಮುಟ್ಟುತಿತ್ತು. ತರ್ಕಿಸುವರು ತರ್ಕಿಸುತ್ತಿದ್ದರು. ವ್ಯಂಗ್ಯವಾಗಿ ನಗುವರು ನಗುತ್ತಲೇ ಇರುತ್ತಿದ್ದರು, ಅಣುಕಿಸುವವರು ಅಣುಕಿಸುತ್ತಲೇ ಇರುತ್ತಿದ್ದರು. ಆದರೆ ಪವಾಡ ಕಂಡು, ಆತ್ಮಸಾಕ್ಷಿಯು ಒಪ್ಪಿದರೆ. ಅದರ ಮುಂದೆ ಯಾರ ತರ್ಕಕ್ಕು ಭಕ್ತನು ಚಿಂತಿಸ ಬೇಕಾದ ಅಗತ್ಯವು ಬೇಡ. ಎಲ್ಲಾ ಧರ್ಮಗಳ ಆಚಾರ- ವಿಚಾರ, ಸಂಪ್ರಾದಯ ಅನುಷ್ಠಾನಗಳು ನಂಬಿಕೆಯ ತಳಹದಿಯ ಮೇಲೆ ಗಟ್ಟಿಯಾಗಿ ನಿಂತುಕೊಂಡಿದೆ. ಅಪನಂಬಿಕೆ ಮೂಡಿದರೆ, ಆಸ್ತಿಕ ಭಾವನೆ ದೂರವಾಗಿ ನಾಸ್ತಿಕ ಪ್ರಪಂಚ ಸೃಷ್ಠಿಯಾಗುದರಲ್ಲಿ ಸಂಶಯ ಇಲ್ಲ..! ಪ್ರಕೃತಿಯೂ ಕೂಡ ಸಮತೋಲನವನ್ನು ಕಳೆದುಕೊಳ್ಳುತ್ತದೆ.

Advertisement

ತಾರಾನಾಥ್‌ ಮೇಸ್ತ ಶಿರೂರು.

LEAVE A REPLY

Please enter your comment!
Please enter your name here