ಹಂತಕರಿಗೆ ರಾಜಾತಿಥ್ಯ

0
371

ಉಡುಪಿ ಪ್ರತಿನಿಧಿ ವರದಿ
ಉಡುಪಿಯ ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಹಂತಕರಿಗೆ ರಾಜಾತಿಥ್ಯ ನೀಡಿದ ಆರೋಪ ಬಂದಿದೆ. ಮಣಿಪಾಲ ಪೊಲೀಸರ ವಿರುದ್ಧ ರಾಜಾತಿಥ್ಯ ನೀಡಿದ ಆರೋಪ ಕೇಳಿಬಂದಿದೆ.
 
 
ಪೊಲೀಸರು ಆರೋಪಿಗಳನ್ನು ಐಷಾರಾಮಿ ಹೋಟೆಲ್ ಗೆ ಕರೆದೊಯ್ದು ರಾಜಾತಿಥ್ಯ ನೀಡಿದ್ದಾರೆಂದು ಆರೋಪಿಸಲಾಗಿದೆ. ನಿಟ್ಟೆ ಗ್ರಾಮದ ಬಳಿಯ ರತ್ನಾ ಫಾರ್ ಎವರ್ ಹೋಟೆಲ್ ನಲ್ಲಿ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ, ನಿರಂಜನ್ ತಂದೆ ಶ್ರೀನಿವಾಸ್ ಭಟ್ ಗೆ ರಾಜಾತಿಥ್ಯ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಆಗಸ್ಟ್ 10ರಂದು ಹೋಟೆಲ್ ಸಿಸಿಟಿವಿಯಲ್ಲಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
 
 
ಆರೋಪ ತಳ್ಳಿ ಹಾಕಿದ ಪೊಲೀಸರು…
ಆದರೆ ಈ ಆರೋಪವನ್ನು ಮಣಿಪಾಲ ತಳ್ಳಿಹಾಕಿದ್ದಾರೆ. ನಮಗೆ ಯಾವುದೇ ರೀತಿಯ ರಾಜಾತಿಥ್ಯ ನೀಡುವ ಉದ್ದೇಶವಿರಲಿಲ್ಲ ಎಂದು ಈ ಬಗ್ಗೆ ಈಗಾಗಲೇ ಮಣಿಪಾಲ ಠಾಣೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಊಟದ ಸಮಯವಾಗಿದ್ದರಿಂದ ಹೋಟೆಲ್ ಹೋಗಲಾಗಿತ್ತು. ಆಗ ಬೇರೆ ಹೋಟೆಲ್ ಸಿಗದೇ ಫಾರ್ ಎವರ್ ಹೋಟೆಲ್ ನಲ್ಲಿ ಊಟ ನೀಡಲಾಗಿದೆ. ಇದನ್ನೇ ರಾಜಾತಿಥ್ಯ ಎಂದು ಯಾರೂ ಪರಿಗಣಿಸಬಾರದು ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here