ಸ್ವೀಟ್‌ ಕಾರ್ನ್‌ ಸೂಪ್‌

0
247

 
ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು :
ಅಮೆರಿಕನ್‌ಸ್ವೀಟ್‌ಕಾರ್ನ್ 1/2 ಕಪ್‌, ಕ್ಯಾರೆಟ್‌  1/4 ಕಪ್‌, ಬೀನ್ಸ್‌1/4 ಕಪ್, ಬಟಾಣಿ 1/4 ಕಪ್‌, ಬೆಳ್ಳುಳ್ಳಿ, ಶುಂಠಿ ಪೇಸ್ಟ್‌1 ಚಮಚ, ಪೆಪ್ಪರ್‌ಪೌಡರ್‌1 ಚಮಚಬೆಣ್ಣೆ 1ಚಮಚ, ಕಾರ್ನ್‌ಫ್ಲೋರ್‌1 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
 
 
ತಯಾರಿಸುವ ವಿಧಾನ
ಮೊದಲಿಗೆ ಪ್ಯಾನ್‌ವೊಂದರಲ್ಲಿ ಬೆಣ್ಣೆ ಹಾಕಿ. ಅದು ಕರಗಿದ ಮೇಲೆ ಒಂದು ಚಮಚ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ಹಾಕಿ ಬಿಸಿ ಮಾಡಿ. ಈ ಮಿಶ್ರಣಕ್ಕೆ 1/2 ಕಪ್‌ಅಮೆರಿಕನ್‌ಸ್ವೀಟ್‌ಕಾರ್ನ್‌, ಚಿಕ್ಕದಾಗಿ ಕತ್ತರಿಸಿದ ಕ್ಯಾರೆಟ್‌, ಬೀನ್ಸ್‌ಹಾಗೂ ಹಸಿ ಬಟಾಣಿ ಹಾಕಿ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಫ್ರೈ ಮಾಡಿ.ಫ್ರೈ ಆದ ಮೇಲೆ ಆ ಮಿಶ್ರಣಕ್ಕೆ 2 ಗ್ಲಾಸ್‌ನೀರು ಹಾಕಿ ಕುದಿಸಿ. ಇನ್ನೊಂದೆಡೆ ಮಿಕ್ಸಿಯಲ್ಲಿ 5 ಚಮಚದಷ್ಟು ಹಸಿ ಕಾರ್ನ್‌ನ್ನು ಗ್ರೈಂಡ್‌ಮಾಡಿ ಆ ಮಿಶ್ರಣವನ್ನು ಕುದಿಬರುತ್ತಿರುವ ಮಿಶ್ರಣಕ್ಕೆ ಸೇರಿಸಿ. ಹತ್ತು ನಿಮಿಷದ ನಂತರ ಒಂದು ಸ್ಪೂನ್‌ಕಾರ್ನ್‌ಫ್ಲೋರನ್ನು 3 ಚಮಚ ನೀರಿನಲ್ಲಿ ಕಲಿಸಿ ಕುದಿಬರುತ್ತಿರುವ ಸೂಪ್‌ಗೆ ಸೇರಿಸಿ. ಈಗ ಪೆಪ್ಪರ್‌ಪೌಡರ್‌ಸೇರಿಸಿ ಸೂಪ್‌ನ್ನು ಚೆನ್ನಾಗಿ ಮಿಶ್ರ ಮಾಡಿ. ಕೊನೆಯಲ್ಲಿ ಸರ್ವ್‌ಮಾಡೋ ಮುನ್ನ ಮತ್ತೊಮ್ಮೆ ಬೆಣ್ಣೆ ಸೇರಿಸಿ. ಈಗ ಬಿಸಿ ಬಿಸಿ ಆರೋಗ್ಯಕರವಾದ ಹಾಗೂ ಟೇಸ್ಟಿಯಾದ ಸೂಪ್‌ಸವಿಯಲು ರೆಡಿ.

LEAVE A REPLY

Please enter your comment!
Please enter your name here