ಸ್ವಿಸ್ ನಲ್ಲಿ ಭಾರತದ ಖಾತೆದಾರರ ಇಳಿಕೆ

0
172


ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಸ್ವಿಸ್ ಬ್ಯಾಂಕ್ ಗಳಲ್ಲಿ ಠೇವಣಿಯಿಡುವ ಭಾರತೀಯರ ಸಂಖ್ಯೆ ಇಳಿಕೆಯಾಗಿದೆ. ಹೆಚ್ಚು ಠೇವಣಿ ಹಣವಿರುವ ದೇಶಗಳ ಪಟ್ಟಿಯಲ್ಲಿ ಭಾರತ 75ನೇ ಸ್ಥಾನದಲ್ಲಿದೆ.
 
 
2004ರಲ್ಲಿ ಭಾರತ 37 ನೇ ಸ್ಥಾನದಲ್ಲಿತ್ತು. ಕಳೆದ ವರ್ಷದ 61ನೇ ಸ್ಥಾನದಲ್ಲಿದ್ದ ಭಾರತ 75ನೇ ಸ್ಥಾನಕ್ಕಿಳಿದಿದೆ ಎಂದು ಸ್ವಸ್ ಬ್ಯಾಂಕ್ ಗಲ ವಾರ್ಷಿಕ ವರದಿಯಲ್ಲಿ ಮಾಹಿತಿ ಬಹಿರಂಗವಾಗಿದೆ.
 
 
ಸ್ವಿಸ್ ಬ್ಯಾಂಕ್​ಗೆ ಜಮೆ ಮಾಡಿದವರಲ್ಲಿ ಗ್ರೇಟ್ ಬ್ರಿಟನ್(ಯು.ಕೆ.) ಪ್ರಥಮ ಸ್ಥಾನದಲ್ಲಿದೆ. ಅಮೆರಿಕ ದ್ವಿತೀಯ ಸ್ಥಾನ. ವೆಸ್ಟ್ ಇಂಡೀಸ್, ಜರ್ಮನಿ, ಫ್ರಾನ್ಸ್​ಗಳಿಗೆ ನಂತರದ ಸ್ಥಾನ.ಪಾಕ್​ಗೆ 69ನೇ ಸ್ಥಾನ.
 
 
ಅಂಕಿ ಅಂಶದ ಪ್ರಕಾರ ವಿಶ್ವದ ಬೇರೆ ಬೇರೆ ರಾಷ್ಟ್ರದ ಜನ ಅಲ್ಲಿ ಇಟ್ಟಿರುವ ಒಟ್ಟು ಹಣ 1.42 ಟ್ರಿಲಿಯನ್ ಸ್ವಿಸ್​ಫ್ರಾನ್ಸ್. (ಅಂದರೆ 98 ಲಕ್ಷ ಕೋಟಿ ರೂ.). ಜಗತ್ತಿನ ಒಟ್ಟೂ ಹಣದ ಶೇ. 25 ಭಾಗ ಸ್ವಿಸ್ ಬ್ಯಾಂಕಿನಲ್ಲೇ ಇದೆ. ಇದರಲ್ಲಿ ಗ್ರೇಟ್ ಬ್ರಿಟನ್ ಪಾಲು ಶೇ. 14. ಭಾರತೀಯ ಗಣ್ಯಮಾನ್ಯರು ಶೇ. 0.1 ರಷ್ಟು (ಅಂದರೆ 8,392 ಕೋಟಿ ರೂ.) ಜಮಾ ಮಾಡಿದ್ದಾರೆ.

LEAVE A REPLY

Please enter your comment!
Please enter your name here