ಭಾರತದಲ್ಲಿ ಮತ್ತೊಂದು ಚಿನ್ನದ ಗಣಿ ಪ್ರದೇಶ ಪತ್ತೆಯಾಗಿದೆ. ಈ ಗಣಿಯು ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯ ಎರಡು ಪ್ರದೇಶದಲ್ಲಿ ಪತ್ತೆಯಾಗಿದೆ. ಜಿಲ್ಲೆಯ ಹರ್ದಿ ಮತ್ತು ಸನ್ಪಹಡಿ ಗ್ರಾಮದಲ್ಲಿ ಬೃಹತ್ ಚಿನ್ನದ ಗಣಿಯನ್ನು ಭೌಗೋಳಿಕ ತಜ್ಞರು ಪತ್ತೆಹಚ್ಚಿದ್ದಾರೆ.
ಭಾರತದ ಭೌಗೋಳಿಕ ಸಮೀಕ್ಷೆ(ಜಿಎಸ್ಐ) ಹಾಗೂ ಉತ್ತರಪ್ರದೇಶದ ಭುಗೋಳ ಮತ್ತು ಗಣಿ ಪ್ರಾಧಿಕಾರವು ಕಳೆದ ಎರಡು ದಶಕಗಳಿಂದ ಗಣಿಗಾಗಿ ಶೋಧ ನಡೆಸುತ್ತಿತ್ತು. ಆದರೆ 2005ರಲ್ಲಿ ಜಿ ಎಸ್ ಐ ತಂಡ ಸೋನಭದ್ರದಲ್ಲಿ ಗಣಿ ಇದೆ ಎಂದು ಮಾಹಿತಿ ನೀಡಿದ್ದು, 2012ರಲ್ಲಿ ಖಚಿತವಾಗಿತ್ತು.
Advertisement
ಈ ಜಿಲ್ಲೆಯು ಹಿಮದ ತಪ್ಪಲಿನಿಂದ ಕೂಡಿದ್ದು, ನಕ್ಸಲ್ ಪೀಡಿತ ಪ್ರದೇಶವಾಗಿದೆ. ಜಿಲ್ಲೆಯ ಸನ್ಪಪಡಿ ಗ್ರಾಮದಲ್ಲಿ 2943.25 ಟನ್ ಚಿನ್ನ ಪತ್ತೆಯಾಗಿದ್ದು, ಹರ್ದಿಯ ಗ್ರಾಮದಲ್ಲಿ 650 ಟನ್ ಚಿನ್ನ ಪತ್ತೆಯಾಗಿದೆ. ಹೀಗೆ ಎರಡು ಗ್ರಾಮದಲ್ಲಿ ಸುಮಾರು 3,500 ಟನ್ ಚಿನ್ನ ಪತ್ತೆಯಾಗಿದೆ ಎಂದು ಜಿಎಸ್ಐ ತಂಡ ತಿಳಿಸಿದೆ. ಈ ಎರಡು ಗಣಿಗಳು ಕೆಜಿಎಫ್ ಗಿಂತಲೂ ದೊಡ್ಡ ಗಣಿ ಎನ್ನಲಾಗಿದೆ.