ಅಂಕಣಗಳುವಾರ್ತೆ

ಸ್ವಧಮೇ೯ ನಿಧನಂ ಶ್ರೇಯಃ!

ಮಸೂರ ಅಂಕಣ: ಆರ್ ಎಂ ಶರ್ಮಾ
ತಲೆಬರಹದ ಮಾತು ಪರಮಾತ್ಮನ ಮತು.
ಇದಕ್ಕೆ ಎರಡಿಲ್ಲ ಇರಬಾರದೂ ಕೂಡಾ.
ಹುಟ್ಟಿಗೆ ಸಾವು ಪೂವ೯ನಿಧಾ೯ರಿತವೇ.
ಹಾಗಾದರೆ ಅಶ್ರೇಯಕರವಿದೆಯೇ?
ಇರಬಾರದೇ?
ಇರಲೇ ಬೇಕು-ಇದೆ-ಇದು ಸತ್ಯಾತ್ ಸತ್ಯವೇ.
ಆದುದರಿಂದ ಪರಮಾತ್ಮನಮಾತೇ-
“ಪರಧಮೋ೯ ಭಯಾವಃ”.
ಹಾಗಾದರೆ ಆಪರಧಮ೯ ಯಾವುದು?
ಇದು ಉಚಿತವೇ ತಿಳಿಯಲು ಖಂಡಿತವಾಗಿಯೂ.
ಪರಮಾತ್ಮನ ಸೃಷ್ಟಿಯ ಎಲ್ಲಾ ಭೂತಗಳು ಪರಾತ್ಪರದ ನೆಲೆಗಳೇ.
ಇಲ್ಲಿ ಸಂಶಯವಿಲ್ಲ-ಇರಬರದು ಕೂಡಾ.
ಸಧ್ಯಃ ಜಲ್ಲಿಕಟ್ಟು ಬಗೆಗೆ ಮಾತನಾಡೋಣ.
ಇದುಹೋರಿಕಾಳಗವೇ-ಗೋರಿಕಾಳಗವೇ-ಘೋರಕಾಳಗವೇ?
ಎಲ್ಲವೂ ಸತ್ಯ-ಎಲ್ಲವೂ ನಿತ್ಯ-ನಿರಂತರ-ಇಲ್ಲಿಯೇ ಅಂತರ-ಆಂತಯ್ಜನಮಾನಸದಾ೯-ಐಶ್ವಯ೯ ಎಲ್ಲಾ ಎಲ್ಲೆಲ್ಲೂ-ಯಾವಾಗಲೂ
ಅಂತರದಿಂದ ಸ್ವಾತಂತ್ರ್ಯದ ಹನನ.
ಹಾಗಾಗಿ ಕಲಹ-ಕಂಬನಿ-ಅಲ್ಲೋಲಕಲ್ಲೋಲ ಎಲ್ಲಾ.
ಏಕೆ ಇವೆಲ್ಲಾ ಎಂದರೆ ಬಾಯಿಲ್ಲದ-ಅಥಾ೯ತ್ ಮಾತಿಲ್ಲದ-ಮಾತನಾಡದ ಮೂಕ ಪ್ರಾಣಿ-ಎತ್ತು-ಹೋರಿ-“ಬುಲ್”.
ಇಲ್ಲಿ ಸಂಪ್ರದಾಯವಿದೆ-ಶತಮಾನಗಳ ಮಾನವಿದೆ-ಮೌಲ್ಯವಿದೆ-ಮೇಧಾ ಇದೆ-ಎಂತಲೇ ಸಂಪ್ರದಾಯವಾದಿಗಳ ಮತ-ಅದೇ ಹಿತ ಈ ಕಲಿಯುಗದಲ್ಲಿಯೂ.
ಆಧುನಿಕ ಜಗತ್ತು-ವಿದ್ಯಾವಂತರ ಜಗತ್ತು-ಆದರೂ ಜಟ್ಟಿಗಳ-ಕುಸ್ತಿವರಸೆಯ ಪ್ರಭುಗಳಿಗೆ ವಿದ್ಯೆ ಇದ್ದರೂ ಬೇಡದ-ಬೆಂಡಾದ-ಭಂಡತನದ ವಾದ-ಹೋರಿಕಾಳಗಜನಮಾನಸದ ಅಪಾರ ಪ್ರೇಮದ-ಶ್ರದ್ಧೆಯ-ನಂಬಿಕೆಯ ಆತ.
ಜನಕ್ಕೆ ಆಟ-ಜಾನುವಾರಿಗೆ ಕಾಟ.ಇಲ್ಲಿಯ ತಥ್ಯ-ಸತ್ಯ ಸತ್ಯವಾಗಿಯೂ.
ಏನೀ ಪರಿಪಾಟ?
“ಆಶ್ಚಯ೯ವತ್ ಪಶ್ಯತಿ ಕಶ್ಚಿದೇನಂ-ಆಸ್ಚಯ೯ವತ್ ವದತಿ ಚಾನ್ಯಃ”-ಇದೇ ಇಲ್ಲಿಯ ರೋಚಕ-ಸೂಚಕ-ಸೂತಕದ ಮಾತು.
ಕನ್ನಡದ ಗಾದೆ-
“ಬೆಕ್ಕಿಗೆ ಚಲ್ಲಾಟ-ಇಲಿಗೆ ಪ್ರಾಣಸಂಕಟ”-ಇದೇ ಇಲ್ಲಿಯ ತಥ್ಯ-ಸತ್ಯ -ನಿತ್ಯವಾಗಿ.
ಜನದ ಆನಂದ-ಜಾನುವಾರಿನ ಅಳಲು-ತೊಳಲು.
ಕೇಳಲು ಜನವಿಲ್ಲ-ಮನವಿಲ್ಲ-ಸಮಯವಿಲ್ಲ.
ಎಲ್ಲೆಲ್ಲೂಇಲ್ಲದಕ್ಕೆ-“ವಿಲ್ಲ ಪ್ರಭುಗಳದ್ದೇ ಯಾಜಮಾನ್ಯ.
ಇದೇ ಸವ೯ಮಾನ್ಯ-ಸನ್ಮಾನ್ಯ-ಅನನ್ಯ-ಅನ್ಯೋನ್ಯ.
ಉಳಿದವಿದ್ದರೆ-ಇರಲು ಬಿಟ್ಟರೆ-ಅವೆಲ್ಲಾ-ಅನ್ಯ-ಶೂನ್ಯ.
ಬಾಯಿದ್ದವ ಬದುಕಿದ-ಬಾಯಿ ಮುಚ್ಚಿದವ ಸತ್ತ.
ಸಾವು ಸತ್ಯ ಆದರೆ ಅದುಅಯಾಚಿತ,ಅನುಚಿತವಾದರೆ ಅಪಚಾರ-ಅಪರಾಧ.
“ಮುಂದುವರೆದಿದೆ”
ಅದೇ ಈಗ ಇಲ್ಲಿ ಜಲ್ಲಿಕಟ್ಟುವಿನ ಕಟ್ಟುಪಾಡು.
ಹೋರಿಯ ಗೋರಿ-ಜನದ ಮಾರಾಮಾರಿ-ಇದೇ ವರಿ-ಉರಿ.
ಜನ ದೊಂಬಿಯೆದ್ದರು.
ಆಳುವ ಯಾಜಮಾನ್ಯ ಮೌನ.
ಕಾಯಿದೆಯ ಪ್ರಭು-ನೋಡುವ-ಕೇಳುವ ಜಾಣ್ಮೆಯ ತವರು.
ಪ್ರಾಣಿಗೆ ಕಾಯಿದೆ ಇಲ್ಲ-ಬರೀ ಖಾಹಿಲೆ.
ರೋಗ-ಉಲ್ಬಣ-ಮದ್ದಿಲ್ಲ.
ಉಲ್ಬಣಕ್ಕೆ-ದಿಬ್ಬಣ-ಎನೀ ಜಾಣತನ?
ಆರ್ ಎಂ ಶರ್ಮಾ
 

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here