ಸ್ವದೇಶಕ್ಕೆ ವಾಪಸ್ ಆದ ಪ್ರಧಾನಿ

0
248
ವರದಿ: ಲೇಖಾ
ಆಫ್ರಿಕಾ ದೇಶಗಳ ಪ್ರವಾಸ ಮುಗಿಸಿ ಸ್ವದೇಶಕ್ಕೆ ವಾಪಸ್ ಆದ ಪ್ರಧಾನಿ…
ಆಫ್ರಿಕಾದ ನಾಲ್ಕು ರಾಷ್ಟ್ರಗಳ ಯಶಸ್ವಿ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ವಾಪಸ್ಸಾಗಿದ್ದಾರೆ. ದಕ್ಷಿಣ ಆಫ್ರಿಕಾ, ಮೊಜಾಂಬಿಕ್, ತಾಂಜಾನಿಯಾ ಮತ್ತು ಕೀನ್ಯಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿರುವ ಪ್ರಧಾನಿ ಮೋದಿ ಇಂದು ಮುಂಜಾನೆ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.
ಜುಲೈ 7ರಂದು ಮೊಜಾಂಬಿಕ್​ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಜನಸಾಮಾನ್ಯರಲ್ಲಿ ಆತಂಕ ಹುಟ್ಟಿಸಿದ್ದ ಧಾನ್ಯಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೊಜಾಂಬಿಕ್ ಸರ್ಕಾರದ ಜತೆಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದಾರೆ.
ಜುಲೈ 8 ಮತ್ತು 9 ರಂದು ದಕ್ಷಿಣ ಆಫ್ರಿಕಾಗೆ ತೆರಳಿ, ಎಂಟು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಭದ್ರತಾ ಉಪಕರಣ ಉತ್ಪಾದನೆ, ಗಣಿಗಾರಿಕೆ, ಕೈಗಾರಿಕೆಗೆ ಸಂಬಂಧಿಸಿದಂತೆ ಭಾರತದ ಕೆಲ ಖಾಸಗಿ ಕಂಪನಿಗಳು ಅಲ್ಲಿನ ಕಂಪನಿಗಳ ಜತೆ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿವೆ.
ಜುಲೈ 10ರಂದು ತಾಂಜಾನಿಯಕ್ಕೆ ಭೇಟಿ ನೀಡಿದ ಪ್ರಧಾನಿ, ಝುುಂಝಿಬಾರ್​ನಲ್ಲಿ ನೀರು ಸರಬರಾಜು ವ್ಯವಸ್ಥೆಗೆ 920 ಲಕ್ಷ ಡಾಲರ್ ನೆರವು ನೀಡಿಕೆ ಸೇರಿದಂತೆ ವಿವಿಧ ರಂಗಗಳಲ್ಲಿ ಪರಸ್ಪರ ಸಹಕರಿಸುವ ಐದು ಅಂಶಗಳ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ಜುಲೈ 11 ರಂದು ಕೀನ್ಯಾಗೆ ಭೇಟಿ ನೀಡಿ, ರಕ್ಷಣೆ, ಸೈಬರ್ ಭದ್ರತೆ, ಮಾದಕ ದ್ರವ್ಯಗಳು ಹಾಗೂ ಮಾನವ ಕಳ್ಳಸಾಗಣೆ ಹಾವಳಿ ನಿವಾರಣೆ ನಿಟ್ಟಿನಲ್ಲಿ ರಕ್ಷಣಾ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸುವ ವಿಚಾರವಾಗಿ ಯಶಸ್ವಿ ಮಾತುಕತೆ ನಡೆಸಿ ಸ್ವದೇಶಕ್ಕೆ ವಾಪಸ್ ಆಗಿದ್ದಾರೆ.

LEAVE A REPLY

Please enter your comment!
Please enter your name here