ಸ್ವಚ್ಛ ಭಾರತ ಅಭಿಯಾನ

0
305
????????????????????????????????????

ಬೆಂಗಳೂರು ಪ್ರತಿನಿಧಿ ವರದಿ
ಗೀತಂ ವಿಶ್ವವಿದ್ಯಾಲಯ ಹಾಗೂ ಎನ್ ಸಿಸಿ 10 ಕರ್ನಾಟಕ ಬಟಾಲಿಯನ್ ಕೋಲಾರ, ಸಹಯೋಗದೊಂದಿಗೆ ದೇವನಹಳ್ಳಿ ಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
githam_swacha
 
ಈ ಕಾರ್ಯಕ್ರಮದಲ್ಲಿ ನೂರಾರು ಎನ್ ಸಿಸಿ ಕೆಡೆಟ್ಗಳು ಹಾಗೂ ಗೀತಂ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಭಾಗವಹಿಸಿದರು. ದೇವನಹಳ್ಳಿ ಬಸ್ ನಿಲ್ದಾಣ ಹಾಗೂ ಪಂಚಾಯತ್ ಕಚೇರಿ ಸುತ್ತಮುತ್ತ ಸ್ವಚ್ಛಗೊಳಿಸಿದರು.
 
 
ಎನ್ ಸಿಸಿ 10 ಕರ್ನಾಟಕ ಬಟಾಲಿಯನ್ ಕೋಲಾರ, ವತಿಯಿಂದ ಗೀತಂ ವಿಶ್ವವಿದ್ಯಾಲಯ ಬೆಂಗಳೂರು ಕ್ಯಾಂಪಸ್ನಲ್ಲಿ ಆರ್ ಡಿ ಸಿಲೆಕ್ಶನ್ ಕ್ಯಾಂಪ್ ನಡೆಯುತ್ತಿದ್ದು ಈ ಸಂದರ್ಭದಲ್ಲಿ ತಮ್ಮ ಪರಿಸರವನ್ನು ಸ್ವಚ್ಛವಾಗಿರಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದ್ದು ಎಂಬ ಕರೆಯನ್ನು ವಿದ್ಯಾರ್ಥಿಗಳು ನೀಡಿದರು.
 
 
ಗೀತಂ ವಿಶ್ವವಿದ್ಯಾಲಯದ ಸಹಾಯಕ ಉಪಕುಲಪತಿ ಪ್ರೊ ಶಿವಪುಲ್ಲಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೀತಂ ವಿವಿ ನಿರಂತರವಾಗಿ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಸ್ವಚ್ಛತಾ ಕಾರ್ಯಕ್ರಮವನ್ನು ಕೂಡಾ ಪ್ರತಿವರ್ಷ ನಡೆಸುತ್ತಿದೆ. ಈ ಬಾರಿ ಎನ್ ಸಿಸಿ 10 ಕರ್ನಾಟಕ ಬಟಾಲಿಯನ್ ಕೂಡಾ ನಮ್ಮ ಜೊತೆ ಕೈ ಜೋಡಿಸಿದೆ ಎಂದರು.
 
 
ಗೀತಂ ಸ್ಕೂಲ್ ಆಫ್ ಟೆಕ್ನಲಜಿಯ ನಿರ್ದೇಶಕರಾದ ಪ್ರೊ ವಿಜಯ ಭಾಸ್ಕರ್ ರಾಜು, ಬೆಂಗಳೂರು ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ನ ನಿರ್ದೇಶಕರಾದ ಪ್ರೊ ರಾಮ ಪ್ರಸಾದ್, ಸಹಾಯಕ ಪ್ರಾಂಶುಪಾಲರಾದ ಪ್ರೊ ಕೃಷ್ಣ ಪ್ರಸಾದ್, ಎನ್ ಸಿಸಿ ಸಂಯೋಜಕ ಡಾ ಜಯಕುಮಾರ್, ಡಾ ಶರ್ಮ ಎನ್ ಸಿಸಿ 10 ಕರ್ನಾಟಕ ಬಟಾಲಿಯನ್ ಕೋಲಾರದ ಕಮಾಂಡಿಂಗ್ ಆಫಿಸರ್ ಕಲ್ನಲ್ ಸ್ಟಾನ್ಲಿ ಈ ಸಂದರ್ಭದಲ್ಲಿ ಹಾಜರಿದ್ದು ಸ್ವಯಂ ಸೇವಾ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here