ರಾಜ್ಯ

ಸ್ವಚ್ಛಭಾರತ ಅಭಿಯಾನ

ಮಂಗಳೂರು ಉಡುಪಿ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಪಂ ಕಾಂತಾವರ ಇದರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ ಪರಿಕಲ್ಪನೆಯಡಿ ಕಾಂತಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡರು ಕಾಂತಾವರ ಗ್ರಾಮದ ಮನೆ ಮನೆಯಿಂದ ಕಸ ಬೇರ್ಪಡಿಸಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ ಈ ಕಾರ್ಯಕ್ರಮದಲ್ಲಿ ಕಾಂತಾವರ ಪಂಚಾಯತ್ ಅಧ್ಯಕ್ಷರಾದ ಜಯ ಎಸ್ ಕೋಟ್ಯಾನ್ ಪಿಡಿಒ ರಮೇಶ್ ನಾಯಕ ನಿವೃತ್ತ ಶಿಕ್ಷಕ ಧರ್ಮರಾಜ್ ಕಂಬಳಿ ಜೊತೆಗೆ ಗೆಳೆಯರ ಬಳಗ ಕಾಂತಾವರ ಧರ್ಮಸ್ಥಳ ಸ್ವಸಹಾಯ ಸಂಘದ ನೂರಕ್ಕೂ ಹೆಚ್ಚು ಯುವಕ ಯುವತಿಯರು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಯಿತು.

Comment here