ಸ್ವಚ್ಚತಾ ಆಂದೋಲನ್

0
251

ವರದಿ: ಹರ್ಷಾ ರಾವ್
ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಸಲ್ಪಡುವ ಎಲ್ಲಾ ವಸತಿ ನಿಲಯಗಳಲ್ಲಿ , ದೇಶದಾದ್ಯಂತ ನಡೆದ ಸ್ವಚ್ಚತಾ ಆಂದೋಲನ ದ ಪ್ರಯುಕ್ತ ಭಾನುವಾರ ನಡೆದ ರಾಷ್ತ್ರೀಯ ಸ್ವಚ್ಚತಾ ಆಂದೋಲನ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು.
 
 
ಅಂದು ಬೆಳಿಗ್ಗೆ 9.30 ದಲ್ಲಿ ನಿಲಯದ ವಠಾರದಲ್ಲಿ ರಾಷ್ರ್ಟಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಪುಷ್ಪಾರ್ಚನೆ ಮಾಡುವುದರ ಮೂಲಕ ನೆರವೇರಿಸಿ . ಬಳಿಕ ರಾಷ್ಟ್ರೀಯವಾಗಿ ಜನಸಮುದಾಯದ ನಡುವೆ ತಮ್ಮ ಪರಿಸರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಅರಿವನ್ನು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ವಸತಿ ನಿಲಯದ ಸುತ್ತ ಹಾಗೂ ವಿವೇಕಾನಂದ ಕ್ಯಾಂಪಸ್ ನ ಆವರಣದಲ್ಲಿ ನಡೆಸಲಾಯಿತು.
 
 
ವಸತಿ ನಿಲಯದ ಆಡಳಿತ ಮಂಡಳಿ ಕೋಶಾಧಿಕಾರಿಯಾದ ಮಣಿಲ ಸುಬ್ಬಣ್ಣ ಶಾಸ್ತ್ರಿ , .ನಿಲಯ ಪಾಲಕರಾದ ಡಾ|| ಬಿ.ಶ್ರೀಧರ್ ನಾಯಕ್ , ಗೋವಿಂದರಾಜ್ ಶರ್ಮಾ ಶುಭಹಾರೈಸಿದರು, ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ನಿಲಯ ಪಾಲಕರಾದ ಹರೀಶ್ ರಾವ್, ಶ್ರೀನಾಥ್ ಬಿ. ಹಾಗೂ ಎಲ್ಲಾ ಸಹ ನಿಲಯಪಾಲಕರುಗಳು ಉಪಸ್ಥಿರಿದ್ದು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಸಂಪನ್ನಗೊಳಿಸಿದರು.

LEAVE A REPLY

Please enter your comment!
Please enter your name here