ಸ್ಲೀಪರ್ ಬಸ್ ಸೇವೆ ಆರಂಭ

0
419

ಬೆಂಗಳೂರು ಪ್ರತಿನಿಧಿ ವರದಿ
ರಾಜಧಾನಿ ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯಕ್ಕೆ ಸ್ಲೀಪರ್ ಸರಕಾರೀ ಬಸ್ ಸೇವೆ ಪ್ರಾರಂಭಗೊಂಡಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ, ರಾಜಹಂಸ, ವೋಲ್ವೊ ಬಸ್‌ಗಳು ಸಂಚಾರ ನಡೆಸುತ್ತಿದ್ದವು. ಖಾಸಗಿ ಸ್ಲೀಪರ್ ಬಸ್‌ಗಳಿಗೆ ತೀವ್ರ ಬೇಡಿಕೆ ಉಂಟಾದ ಹಿನ್ನಲೆಯಲ್ಲಿ ಕೆಎಸ್‌ಆರ್‌‌ಟಿಸಿ ಕೂಡ ಎಸಿ ಸ್ಲೀಪರ್ ಕರೋನ ಬಸ್‌ಗಳ ಸೇವೆಯನ್ನು ಪ್ರಾರಂಭಿಸಿದೆ.
 
 
 
ಆಗಸ್ಟ್ ತಿಂಗಳ 17 ರಿಂದ ಎಸಿ ಕರೋನ ಸ್ಲೀಪರ್ ಬಸ್ ಸೇವೆ ಆರಂಭಗೊಳ್ಳಲಿದೆ. ಪ್ರಯಾಣಿಕರು ಇದರ ಪ್ರಯೋಜನ ಪಡೆಯಬಹುದು. ಟಿಕೆಟ್ ದರ 650 ರೂ. ಆಗಿದೆ. ಪ್ರತಿ ದಿನ ರಾತ್ರಿ 10.45 ಗಂಟೆಗೆ ಬೆಂಗಳೂರಿನಿಂದ ಹೊರಡುವ ಈ ಸ್ಲೀಪರ್ ಕೋಚ್ ಬಸ್ ಹಾಸನ, ಸಕಲೇಶಪುರ ಮಾರ್ಗವಾಗಿ ಬೆಳಗ್ಗೆ 5.15ಕ್ಕೆ ಧರ್ಮಸ್ಥಳ ತಲುಪುವುದು. ರಾತ್ರಿ 10.45ಕ್ಕೆ ಧರ್ಮಸ್ಥಳದಿಂದ ಹೊರಟು ಬಸ್ ಸಕಲೇಶಪುರ, ಹಾಸನ ಮಾರ್ಗವಾಗಿ ಬೆಳಗ್ಗೆ 5.15ಕ್ಕೆ ಬೆಂಗಳೂರು ತಲುಪುವುದಾಗಿ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here