ಸ್ಯಾಂಡಲ್ ವುಡ್ ಗೆ ಮಂಗಳೂರಿನ ಬಾಲಪ್ರತಿಭೆ

0
412

ನಮ್ಮ ಪ್ರತಿನಿಧಿ ವರದಿ
“ದೇವ್ರನ್ನೆ ಬುಡುಗುರು” ಕನ್ನಡ ಚಲನಚಿತ್ರ ದಲ್ಲಿ ನಮ್ಮ ಮಂಗಳೂರಿನ ಬಾಲಪ್ರತಿಭೆ ಶ್ರೇಯಾ ದಾಸ್ ಬಾಲನಟಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.
 
 
ಈ ಚಲನಚಿತ್ರದ ನಾಯಕ ನಟನಾಗಿ ಅಕುಲ್ ಬಾಲಜಿ ಹಾಗೂ ನಾಯಕಿಯಾಗಿ ಅಥಿತಿ ಆಚಾರ್ಯ ಅಭಿನಯಿಸುತ್ತಿದ್ದಾರೆ. ಚಿತ್ರದ ವಿಶೇಷವೆಂದರೆ ಬಾಲಿವುಡ್ ಜನಪ್ರಿಯ ನಟಿ ಶ್ವೇತಾ ಬಸು ಇಲ್ಲಿ ಇನ್ನೆಸ್ಟಿಗೇಷನ್ ಜರ್ನಲಿಸ್ಟ್ ಅಗಿ ನಟಿಸಿದ್ದಾರೆ.
 
 
 
ಪ್ರಮುಖ ಪಾತ್ರಗಳಲ್ಲಿ ಚಿಕ್ಕಣ್ಣ,ಭಾರತಿ ವಿಷ್ಣುವರ್ಧನ್ ,ಸಿಹಿಕಹಿ ಚಂದ್ರು ,ರೇಖ ,ರಾಕ್ ಲೈನ್ ಸುಧಾಕರ್, ರಾಜೇಶ್ ರಾಮಾನಾಥ್ ನಟಿಸಿದ್ದಾರೆ.
 
 
ಈ ಚಲನಚಿತ್ರದ ಪ್ರತಿಯೊಂದು ಹಾಡನ್ನೂ ಒಬ್ಬೊಬ್ಬ ಜನಪ್ರಿಯ ನಟ ನಟಿಯಾರು ಹಾಡಿದ್ದಾರೆ. ಶಿವರಾಜ್ ಕುಮಾರ್,ಉಪೇಂದ್ರ, ಪುನೀತ್ ರಾಜ್ ಕುಮಾರ್,ಪ್ರಿಯಾಮಣಿ, ಮೇಘನಾ ರಾಜ್ ಹಾಡಿರೋದು ವಿಶೇಷ. ಇದು ಪ್ರಥಮ್ ಅವರ ನಿದೇರ್ಶನದ ಚೊಚ್ಚಲ ಚಲನಚಿತ್ರವಾಗಿದೆ. ಎವೋಷನಲ್ ಹಾರರ್ ಮತ್ತು ನಾನ್ ಸ್ಟಾಪ್ ಕಾಮಿಡಿ ಚಲನಚಿತ್ರವಾಗಿದೆ.

LEAVE A REPLY

Please enter your comment!
Please enter your name here