ಪ್ರಮುಖ ಸುದ್ದಿರಾಜ್ಯವಾರ್ತೆ

ಸ್ಮಾರ್ಟ್ ಸಿಟಿ ಪಟ್ಟಿಗೆ ಬೆಂಗಳೂರು ಸೇರ್ಪಡೆ

ಬೆಂಗಳೂರು ಪ್ರತಿನಿಧಿ ವರದಿ
ಸ್ಮಾರ್ಟ್ ಸಿಟಿ ಪಟ್ಟಿಗೆ ಬೆಂಗಳೂರು ಸೇರಿದಂತೆ 9 ನಗರಗಳನ್ನು ಸೇರ್ಪಡೆಗೊಳಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ.
 
 
9 ನಗರಗಳು ಹೊಸದಾಗಿ ಸೇರ್ಪಡೆಯಾಗುವ ಮೂಲಕ ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಕೊಂಡಿರುವ ನಗರಗಳ ಸಂಖ್ಯೆ 100 ರಿಂದ 109 ಕ್ಕೆ ಏರಿಕೆಯಾಗಲಿದೆ.
 
 
ಈ ಮೂಲಕ ಬೆಂಗಳೂರು, ಅಮರಾವತಿ, ಇಟಾನಗರ, ಗ್ಯಾಗ್ಟೋಕ್, ಪಟನಾ, ತಿರುವನಂತಪುರಂ ಸೇರಿದಂತೆ 9 ನಗರಗಳು ಮುಂದಿನ ಹಂತದಲ್ಲಿ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದಲು ಪೈಪೋಟಿ ನಡೆಸಲಿವೆ.
 
 
ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಜಮ್ಮು ಮತ್ತು ಶ್ರೀನಗರ ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶದಿಂದ ಮೀರತ್ ಅಥವಾ ರಾಯ್ ಬರೇಲಿ ಪಟ್ಟಿಗೆ ಸೇರ್ಪಡೆಯಾಗಲಿದೆ.
 
 
2016ರ ಕೊನೆಯ ವೇಳೆಗೆ ಇನ್ನೂ 40 ನಗರಗಳನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸಲು ಪಟ್ಟಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳಲ್ಲಿ ಪ್ರತಿಯೊಂದು ನಗರಕ್ಕೂ 500 ಕೋಟಿ ರೂ. ಅನುದಾನ ನೀಡಲಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here