ಸ್ಫೋಟಕ ಪತ್ತೆ

0
360

 
ವರದಿ: ಲೇಖಾ
ಬಂಧನಕ್ಕೊಳಗಾಗಿರುವ ಶಂಕಿತ ಐಸಿಸ್‌ ಉಗ್ರರ ಹೈದರಾಬಾದ್‌ ಮನೆಯಿಂದ ಪ್ಯಾರಿಸ್‌ ಮತ್ತು ಬ್ರಸೆಲ್ಸ್‌ ದಾಳಿಗಳಲ್ಲಿ ಬಳಸಲಾದ ಸ್ಫೋಟಕಗಳು ಸಿಕ್ಕಿರುವುದಾಗಿ ಭದ್ರತಾ ಪಡೆಗಳು ತಿಳಿಸಿವೆ.
 
 
 
 
ರಾಷ್ಟ್ರೀಯ ತನಿಖಾ ದಳದಿಂದ ಬಂದಿಸಲ್ಪಟ್ಟಿದ್ದ ಓರ್ವ ಶಂಕಿತ ಐಸಿಸ್‌ ಉಗ್ರನಿಗೆ ಸೇರಿದ ಹೈದರಾಬಾದಿನ ಈ ಮನೆಯಲ್ಲಿ ಮಾರಣಾಂತಿಕ ಸ್ಫೋಟಕ ವಸ್ತು ಟ್ರಯಾಸಿಟೋನ್‌ ಟ್ರೈಪರ್‌ ಆಕ್ಸೈಡ್‌ (ಟಿಎಟಿಪಿ)ಯನ್ನು ವಶಪಡಿಸಿಕೊಳ್ಳಲಾಗಿದ್ದು ಇದನ್ನು ಮನೆಯ ಕೆಳ ಅಂತಸ್ತಿನಲ್ಲಿ ಅವಿತಿಡಲಾಗಿತ್ತು ಎಂದು ತಿಳಿದುಬಂದಿದೆ.
 
 
 
 
ಹೈದರಾಬಾದ್‌ನ ಹಳೇ ನಗರದಲ್ಲಿ ಕಳೆದ ಬುಧವಾರ ಐವರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳವು ಬಂಧಿಸಿತ್ತು ಮತ್ತು ಇತರ ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿತ್ತು.
 
 
 
ಐಸಿಸ್‌ ಉಗ್ರ ಅಬ್ದುಲ್ಲ ಬಿನ್‌ ಅಹ್ಮದ್‌ ಅಲ ಅಮೂದಿ ಅಲಿಯಾಸ್‌ ಫ‌ಹಾದ್‌ ಎಂಬಾತನ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಟಿಎಟಿಪಿ ಸ್ಫೋಟಕವು ಪ್ಯಾರಿಸ್‌ ಮತ್ತು ಬ್ರಸೆಲ್ಸ್‌ ಉಗ್ರ ದಾಳಿಯಲ್ಲಿ ಬಳಸಲಾಗಿತ್ತು ಎಂದು ವರದಿಯಿಂದ ಗೊತ್ತಾಗಿದೆ.
 
 
 
ಹೈದರಾಬಾದಿನ ಐಸಿಸ್‌ ಉಗ್ರರ ತಂಡವು ವಿವಿಐಪಿಗಳನ್ನು ಗುರಿ ಇರಿಸಿಕೊಂಡಿತ್ತಲ್ಲದೆ ನಗರದ ಜನದಟ್ಟನೆಯ ಪ್ರದೇಶಗಳಲ್ಲಿ , ಸರಕಾರಿ ಕಟ್ಟಡಗಳಲ್ಲಿ ಮತ್ತು ಪೊಲೀಸ್‌ ಠಾಣೆಗಳಲ್ಲಿ ಬಾಂಬ್‌ ದಾಳಿ ನಡೆಸುವ ಯೋಜನೆ ಹೊಂದಿತ್ತೆಂಬುದು ಈಗ ತನಿಖೆಯಿಂದ ಗೊತ್ತಾಗಿದೆ.
 
 
 
ಹೈದರಾಬಾದ್‌ ಐಸಿಸ್‌ ಉಗ್ರರ ತಂಡದ ನಾಯಕನಾಗಿರುವ ಮೊಹಮ್ಮದ್‌ ಇಬ್ರಾಹಿಂ ಯಾಝದನಿ ಈಗಾಗಲೇ ಭಾರೀ ಪ್ರಮಾಣದ ಎಸೆಟೋನ್‌, ಹೈಡ್ರೋಜನ್‌ ಪೆರಾಕ್ಸೆಡ್‌ ಮತ್ತು ಸಲ್‌ಫ್ಯೂರಿಕ್‌, ಆ್ಯಸಿಡ್‌ ಖರೀದಿಸಿಟ್ಟು ಕೊಂಡಿದ್ದ. ಇವುಗಳು ಟಿಎಟಿಪಿ ಸ್ಫೋಟಕ ತಯಾರಿಸುವಲ್ಲಿ ಅಗತ್ಯವಾಗಿ ಬೇಕಿರುವ ರಾಸಾಯನಿಕಗಳಾಗಿವೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here