ಸ್ನೇಹ ಮತ್ತು ಸೇವೆಯೊಡನೆ ಪ್ರಗತಿ: ಲಯನ್ಸ್ ಕ್ಲಬ್ ಧ್ಯೇಯ

0
734

 
ವರದಿ: ಸುನೀಲ್ ಬೇಕಲ್
ಪರಸ್ಪರ ಪ್ರೀತಿ- ವಿಶ್ವಾಸದೊಂದಿಗೆ ಸ್ನೇಹ ಮತ್ತು ಸೇವೆಯೊಂದಿಗೆ ಉತ್ತಮ ಪ್ರಗತಿ ಸಾಧಿಸುವುದೇ ಲಯನ್ಸ್ ಕ್ಲಬ್ ಧ್ಯೇಯವಾಗಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಎಚ್.ಆರ್.ನಾಗರಾಜ್ ಹೇಳಿದರು.
 
 
ನಾರಾವಿ ಬಸದಿಯಲ್ಲಿ ಧರ್ಮಶ್ರೀ ಸಭಾಭವನದಲ್ಲಿ ಶನಿವಾರ ನಾರಾವಿ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
 
ವಿಶ್ವದ 210 ದೇಶಗಳಲ್ಲಿ 46 ಸಾವಿರ ಲಯನ್ಸ್ ಕ್ಲಬ್ ಗಳ 14 ಲಕ್ಷ ಸದಸ್ಯರು ಸೇವಾ ದೀಕ್ಷೆಯೊಂದಿಗೆ ಉತ್ತಮ ಸೇವೆ ಮಾಡುತ್ತಿದ್ದಾರೆ. ಜಾಗತಿಕ ಮಟ್ಟದ ಲಯನ್ಸ್ ಕ್ಲಬ್ ನಾರಾವಿಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿ ಪ್ರಗತಿಗೆ ನೆರವು ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತಿದೆ.ಯುವಜನತೆ ಅಧಿಕ ಸಂಖ್ಯೆಯಲ್ಲಿ ಲಯನ್ಸ್ ಕ್ಲಬ್ ಸದಸ್ಯರಾಗಿ ಸಮಾಜ ಸೇವೆ ಮಾಡಬೇಕು ಎಂದು ಅವರು ಕಿವಿ ಮಾತು ಹೇಳಿದರು. ಎಲ್ಲರೂ ತಮ್ಮ ಆದಾಯ ಮತ್ತು ಸಮಯದ ಸ್ವಲ್ಪ ಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಡಬೇಕು ಎಂದು ಅವರು ಸಲಹೆ ನೀಡಿದರು.
 
 
ನಾರಾವಿ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷ ಎನ್. ಪ್ರೇಮ್ ಕುಮಾರ್ ಹೊಸ್ಮಾರು ಮಾತನಾಡಿ ವೈಯಕ್ತಿಕವಾಗಿ ಮಾಡುವದಾನ-ಧರ್ಮ ಹಾಗೂ ಸಮಾಜ ಸೇವೆಗಿಂತ ಲಯನ್ಸ್ ಕ್ಲಬ್ ನಂತಹ ಸೇವಾ ಸಂಸ್ಥೆಯ ಮೂಲಕ ಮಾಡುವ ಸಾಮೂಹಿಕ ಸೇವೆ ಹೆಚ್ಚು ಮಹತ್ವಪೂರ್ಣವಾಗಿದೆ ಎಂದು ಹೇಳಿದರು.
 
 
ಎರಡು ಸಾವಿರ ಅಡಿಕೆ ಗಿಡಗಳು, ನೂರುತೆಂಗಿನ ಗಿಡಗಳು ಮತ್ತುಒಂದು ಸಾವಿರ ಕಾಳುಮೆಣಸಿನ ಗಿಡಗಳನ್ನು ಅವರು ಲಯನ್ಸ್ ಕ್ಲಬ್ ವತಿಯಿಂದ ವಿತರಿಸಿದರು. ವಿಧವೆಯರಿಗೆ ಹಾಗೂ ಅರ್ಹ ಫಲಾನುಭವಿಗಳ ಸ್ವಾವಲಂಬಿ ಜೀವನಕ್ಕಾಗಿ ಅನೇಕ ಹೊಸ ಯೋಜನೆಗಳನ್ನು ರೂಪಿಸುವುದಾಗಿ ಅವರು ಪ್ರಕಟಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
 
 
ಶುಭಾಶಂಸನೆ ಮಾಡಿದ ನಾರಾವಿ ಸಂತಅಂತೋನಿ ಪದವಿ ಕಾಲೇಜಿನಪ್ರಾಂಶುಪಾಲ ಅರುಣ್ ವಿಲ್ಸನ್ ಲೋಬೊ ಮಾತನಾಡಿ, ಸಂಘ-ಸಂಸ್ಥೆಗಳಿಂದ ಸೇವೆ ಪಡೆದವರು ಧನ್ಯತೆಯೊಂದಿಗೆ ತಾವು ಕೂಡಾ ಇತರರ ಸೇವೆ ಮಾಡಬೇಕು. ಸೇವೆ ನಮ್ಮ ಜೀವನ ಧರ್ಮವಾಗಬೇಕು ಎಂದು ಹೇಳಿದರು.
ಲಯನ್ಸ್ ಕ್ಲಬ್ ನ ಪ್ರಾಂತೀಯ ಅಧ್ಯಕ್ಷ ಪ್ರಮತ್ ಕುಮಾರ್, ಪ್ರವೀಣ ಕುಮಾರ್ ಇಂದ್ರ ಉಜಿರೆ, ವೆಂಕಟೇಶ ಪ್ರಭು ವೇಣೂರು, ಅಳದಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಸದಾನಂದ ಪೂಜಾರಿ ಶುಭ ಹಾರೈಸಿದರು.
 
 
ಮಾಜಿ ಅಧ್ಯಕ್ಷರಾಮಚಂದ್ರ ಭಟ್, ನಾರಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವೀಂದ್ರ ಪೂಜಾರಿ ಉಪಸ್ಥಿತರಿದ್ದರು. ಧನಂಜಯ ಜೈನ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸದ ಅಜಿತ್ ಕೊಕ್ರಾಡಿ ಕೊನೆಯಲ್ಲಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here