ಸ್ನೇಹಮಿಲನ

0
377

ಮಂಗಳೂರು ಪ್ರತಿನಿಧಿ ವರದಿ
ಭಾರತೀಯ ಜನತಾ ಪಾರ್ಟಿ ಸ್ಲಂ ಮೋರ್ಚಾ ದ,ಕ ಜಿಲ್ಲೆ ಆಶ್ರಯದಲ್ಲಿ ಪಚ್ಚನಾಡಿ ಅಂಬೇಡ್ಕರ್ ಕಾಲೋನಿ (ಬಸವಲಿಂಗಪ್ಪ ನಗರ)ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸ್ನೇಹಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
 
 
ಈ ಸಭೆಯಲ್ಲಿ ಮೋದಿಯವರ ಬಗ್ಗೆ ಜಿಲ್ಲಾಧ್ಯಕ್ಷರಾದ ರಾಮ ಅಮೀನ್ ಪಚ್ಚನಾಡಿಯವರು ಮಾತಾನಾಡಿದರು. ಅಂಬೇಡ್ಕರ್ ಕಾಲೋನಿ ಅಧ್ಯಕ್ಷರಾದ ಜಯಶೇಖರ್ ಸ್ಥಳೀಯರ ಪರವಾಗಿ ಹೂಗುಚ್ಚ ನೀಡಿ ಸ್ವಾಗತಿಸಲಾಯಿತು.
 
 
ನಂತರ ಸಭೆಯಲ್ಲಿ ಮೋದಿಯವರ 66ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಅವರಿಗೆ ಇನ್ನು ಅತ್ಯುತ್ತಮ ಆರೋಗ್ಯವನ್ನು ನೀಡಿ ದೇಶಸೇವೆ ಮಾಡಲು ಭಗವಂತನು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಪುಟಾಣಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಸಿಹಿ-ತಿಂಡಿಯನ್ನು ವಿತರಿಸಲಾಯಿತು.
 
 
ಈ ಸಂದರ್ಭದಲ್ಲಿ ಶೇಖರ ಪೂಜಾರಿ ತೊಯಿಪೆಕಲ್ಲು ,ಮುರಳೀಧರ್ ಬೋಳಾರ, ಸಂತೋಷ ತುಪ್ಪೆಕಲ್ಲು, ಜಗದೀಶ್ ಕಾವೂರು, ಮ.ನ.ಉತ್ತರದ ಕಾರ್ಯದರ್ಶಿಗಳಾದ ಸಂದೀಪ್ ಬೋಂದೆಲ್, ರವೀಂದ್ರ ನಾಯಕ್, ಪಚ್ಚನಾಡಿ ಬಿಜೆಪಿ ಸ್ಥಾನೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಉಪಸ್ಥಿತರಿದ್ದರು. ಸ್ಲಂ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚೇತಕ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿಜಯಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here