ಉಜಿರೆ ಪ್ರತಿನಿಧಿ ವರದಿ
ಉಜಿರೆಯ ಶ್ರೀ ಧ.ಮ ಕಾಲೇಜಿನ ಎಸ್ ಡಿ ಎಂ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ಇತ್ತೀಚೆಗೆ ಪ್ರತಿಭಾನ್ವೇಷಣೆ ಕಾರ್ಯಕ್ರಮ ನಡೆಯಿತು.
ಪತ್ರಿಕೋದ್ಯಮ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬಂಟ್ಸ್ ಲಯನ್ಸ್ ಇಂಟರ್ನ್ಯಾಶನಲ್ ಪ್ರೊಡಕ್ಷನ್ನ ನಿರ್ದೇಶಕ ರಾಜು ಗುರು ಗರಡಿ ಪ್ರತಿಭೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಇವರೊಂದಿಗೆ ರಾಘವೇಂದ್ರ ಮತ್ತು ಮಂಜುನಾಥ್ ಸಹಕರಿಸಿದರು.
ಸುಮಾರು 100ರಿಂದ 120 ಮಂದಿ ವಿದ್ಯಾರ್ಥಿಗಳೂ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಪ್ರತಿಭಾನ್ವೇಷಣೆಯಲ್ಲಿ ಪಾಲ್ಗೊಂಡಿದ್ದರು. ನಟನೆ ಮತ್ತು ಹಿನ್ನೆಲೆ ಗಾಯನಕ್ಕಾಗಿ ಆಯ್ಕೆ ಪ್ರಕ್ರಿಯೆ ನೆರವೇರಿತು.
ಪ್ರತಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೋ.ಭಾಸ್ಕರ್ ಹೆಗ್ಡೆ ಮತ್ತು ಸಮುದಾಯ ರೇಡಿಯೋ ಮೇಲ್ವಿಚಾರಕ ಶಿವಶಂಕರ್ ಈ ಸಂದರ್ಭ ಉಪಸ್ಥಿತರಿದ್ದರು.