ಸ್ಕಾರ್ಪಿನ್ ಜಲಾಂತರ್ಗಾಮಿ ಮಾಹಿತಿ ಸೋರಿಕೆ!

0
297

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ಪ್ರಮುಖ ಮಾಹಿತಿಗಳು ಸೋರಿಕೆಯಾಗಿದ್ದು ವಿದೇಶಿ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದೆ, ಪ್ರಮುಖವಾಗಿ ನೌಕೆಯ ಶಬ್ದದ ಪ್ರಮಾಣ, ವೇಗ ಮತ್ತು ಶಸ್ತ್ರಾಸ್ತ್ರ ಸಾಮರ್ಥ್ಯಗಳಂತಹ ನಿರ್ಬಂಧಿತ ಮಾಹಿತಿಗಳೇ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.
 
 
 
ಪ್ರಸ್ತುತ ಫ್ರಾನ್ಸ್ ಮೂಲದ ನೌಕಾ ತಯಾರಿಕಾ ಕಂಪನಿ ಡಿಸಿಎನ್‌ಎಸ್ ಸಂಸ್ಥೆ ಮೂಲಕವಾಗಿ ಮುಂಬೈನ ಡಾಕ್ ಯಾರ್ಡ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಕಾರ್ಪೀನ್ ಜಲಾಂತರ್ಗಾಮಿಗೆ ಸಂಬಂಧಿಸಿದ ಸುಮಾರು 22,400 ಪುಟಗಳಷ್ಟು ಸೂಕ್ಷ್ಮ ದಾಖಲೆಗಳು ಸೋರಿಕೆಯಾಗಿವೆ ಎನ್ನಲಾಗಿದೆ.
 
 
ಭಾರತೀಯ ನೌಕಾದಳದ ಸಬ್ ಮೆರಿನ್ ನ ರಹಸ್ಯ ದಾಖಲೆ ಸೋರಕೆ ಬಗ್ಗೆ ಆಸೀಸ್ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸಬ್ ಮೆರಿನ್ ನ 22 ಸಾವಿರ ಪುಟಗಳ ದಾಖಲೆ ಸೋರಿಕೆಯಾಗಿದೆ ಎಂದು ವರದಿಯಾಗಿತ್ತು. ನೌಕೆಗಳ ವೇಗ, ಅದರ ಶಬ್ದ ಮಾಡುವ ಪ್ರಮಾಣ, ಆವರ್ತನ ಪ್ರಮಾಣ ಮತ್ತಿತರ ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಿದೆ.
 
 
 
ಸುಮಾರು 23.5 ಸಾವಿರ ಕೋಟಿ ರು. ವೆಚ್ಚದಲ್ಲಿ 6 ಸಬ್‌ಮೆರಿನ್‌ಗಳ ನಿರ್ಮಾಣ ಮಾಡಲಾಗುತ್ತಿದೆ. ಫ್ರಾನ್ಸ್‌ನ ನೌಕಾ ತಯಾರಿಕಾ ಕಂಪನಿ ಡಿಸಿಎನ್‌ಎಸ್ ನೇತೃತ್ವದಲ್ಲಿ ನೌಕೆ ನಿರ್ಮಾಣವಾಗುತ್ತಿದೆ. ಮುಂದಿನ ಅಕ್ಬೋಬರ್ ಅಥವಾ ನವೆಂಬರ್ ವೇಳೆ ಒಂದು ಜಲಾಂತರ್ಗಾಮಿ ನೌಕಾಪಡೆ ಸೇರಲಿದ್ದು, ಉಳಿದ ಐದು ನೌಕೆಗಳನ್ನು ಬಳಿಕದ ಪ್ರತೀ 9 ತಿಂಗಳಿಗೆ ಒಂದರಂತೆ ನೀಡಲಾಗುತ್ತದೆ.
 
 
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಕ್ಷಣಾ ಇಲಾಖೆ ತನಿಖೆಗೆ ಆದೇಶಿಸಿದ್ದು, ಜತೆಗೆ ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದ ಫ್ರಾನ್ಸ್ ಕೂಡ ಹೇಳಿದೆ.
 
ಯಾವ ಮಾಹಿತಿಗಳು ಸೋರಿಕೆಯಾಗಿದೆ?
ಸಬ್ ಮೆರಿನ್ ನಲ್ಲಿರುವ ಸಿಬ್ಬಂದಿ ಶತ್ರುಗಳ ಅರಿವಿಗೆ ಬಾರದಂತೆ ಸುರಕ್ಷಿತವಾಗಿ ಸಂವಹನ ನಡೆಸಬಲ್ಲ ವ್ಯವಸ್ಥೆ ಜಲಾಂತರ್ಗಾಮಿಯಲ್ಲಿದೆ ಎಂದು ಉಲ್ಲೇಖಗೊಂಡಿದ್ದ ಮಾಹಿತಿ, ಮ್ಯಾಗ್ನೆಟಿಕ್, ಎಲೆಕ್ಟ್ರೋಮ್ಯಾಗ್ನೆಟಿಕ್, ಇನ್‌ಫ್ರಾರೆಡ್ ವ್ಯವಸ್ಥೆ, ಚಲಿಸುವ ವೇಗ, ಸದ್ದು ಮಾಡುವ ಪ್ರಮಾಣ, ಕಾರ್ಯಾಚರಣೆ ಮತ್ತು ಯುದ್ಧ ವಿಧಾನಗಳಿಗೆ ಸಂಬಂಧಿಸಿದ ಡಾಟಾಗಳು ಸೋರಿಕೆಯಾಗಿದೆ.
 
 
 
ಎಷ್ಟೆಷ್ಟು ಮಾಹಿತಿ ಸೋರಿಕೆ?
ಅಂಡರ್ ವಾಟರ್ ಸೆನ್ಸರ್ 4,457 ಪುಟಗಳು, ಅಬೋವ್ ವಾಟರ್ ಸೆನ್ಸರ್ 4,209 ಪುಟಗಳು, ಯುದ್ಧ ವಿಮಾನ 4,301 ಪುಟಗಳು, ಟಾರ್ಪಿಡೊ ಲಾಂಚ್ ಸಿಸ್ಟಂ 493 ಪುಟಗಳು, ಸಂವಹನ ವ್ಯವಸ್ಥೆ 6,841ಪುಟಗಳು, ದಿಕ್ಸೂಚಿ ವ್ಯವಸ್ಥೆ 2, 138 ಪುಟಗಳು ಸೋರಿಕೆಯಾಗಿದೆ.

LEAVE A REPLY

Please enter your comment!
Please enter your name here