ಸೌರಶಕ್ತಿ ಯೋಜನೆಗಳಿಗೆ ವಿಶ್ವ ಬ್ಯಾಂಕ್ ಸಾಲ

0
367

 
ವರದಿ: ಲೇಖಾ
ಭಾರತದ ಸೌರಶಕ್ತಿ ಯೋಜನೆಗಳಿಗೆ 6500 ಕೋಟಿ ರೂ. ಮೊತ್ತದ ಸಾಲ ನೀಡಲು ವಿಶ್ವಬ್ಯಾಂಕ್ ಮುಂದಾಗಿದೆ. ಭಾರತ ಪ್ರವಾಸದಲ್ಲಿರುವ ವಿಶ್ವಬ್ಯಾಂಕ್ ಮುಖ್ಯಸ್ಥ ಜಿಮ್ ಯಾಂಗ್ ಕಿಮ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
 
 
 
ಸೌರಶಕ್ತಿ ಉತ್ಪಾದನೆ ಕ್ಷೇತ್ರಕ್ಕೆ ವಿಶ್ವಬ್ಯಾಂಕ್ ಪ್ರಮುಖ ಸಾಲ ನೀಡುವ ಸಂಸ್ಥೆಯಾಗಿದೆ. ಈ ಬಾರಿ ಭಾರತಕ್ಕೆ ಶೇ. 30ರಷ್ಟು ಹೆಚ್ಚು ಸಾಲ ನೀಡಲು ನಿರ್ಧರಿಸಿದೆ. ಅಲ್ಲದೆ ವಿಶ್ವದ ಪ್ರಮುಖ ಕಂಪನಿಗಳು ಮತ್ತು ಸಂಸ್ಥೆಗಳಿಂದ ಹೂಡಿಕೆ ಶಿಫಾರಸನ್ನು ನಿರೀಕ್ಷಿಸಲಾಗಿದೆ ಎಂದು ಕಿಮ್ ಹೇಳಿದ್ದಾರೆ.
 
 
 
ಭಾರತ 2020ರ ವೇಳೆಗೆ 100 ಗಿಗಾವ್ಯಾಟ್ ಸೌರವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ಇದನ್ನು ಪೂರೈಸಲು ವಿಶ್ವಬ್ಯಾಂಕ್ ಎಲ್ಲ ಅನುಕೂಲಗಳನ್ನೂ ನೀಡುತ್ತದೆ ಎಂದು ತಿಳಿಸಿದ್ದಾರೆ.
 
 
 
ನವೀಕರಿಸಬಹುದಾದ ಇಂಧನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬದ್ಧತೆಯನ್ನು ಹೊಂದಿದ್ದು, ಇದನ್ನು ಕಿಮ್ ಮೆಚ್ಚಿದ್ದಾರೆ. ಈ ಭರವಸೆಯಿಂದಲೇ ವಿಶ್ವಬ್ಯಾಂಕ್ ಸಾಲ ನೀಡುತ್ತಿದೆ ಎಂಬ ಅಂಶವನ್ನೂ ಅವರು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here