ಸೌತೆಕಾಯಿ ಸುಟ್ಟವು

0
336

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
1 ಕಪ್ ಸೌತೆಕಾಯಿ ತುರಿ, 2 ಕಪ್ ಅಕ್ಕಿ, 1/2 ಕಪ್ ಬೆಲ್ಲ, ಏಲಕ್ಕಿ, ತುಪ್ಪ, ಉಪ್ಪು.
 
 
ತಯಾರಿಸುವ ವಿಧಾನ:
ಅಕ್ಕಿಯನ್ನು ಆರು ಗಂಟೆಗಳ ನೀರಲ್ಲಿ ನೆನೆ ಹಾಕಿ ಸೌತೆಕಾಯಿ ತುರಿಯೊಂದಿಗೆ ರುಬ್ಬಿ. ಬೆಲ್ಲ, ಏಲಕ್ಕಿ ಪುಡಿ ಮತ್ತು ಉಪ್ಪನ್ನು ರುಚಿಗೆ ತಕ್ಕಷ್ಟು ಸೇರಿಸಿ. ರುಬ್ಬಿದ ಹಿಟ್ಟನ್ನು ಒಲೆಯ ಮೇಲಿಟ್ಟು ಸ್ವಲ್ಪ ದಪ್ಪಗಾಗುವವರೆಗೆ ಕುದಿಸಿ. ದೊಸೆ ಮಾಡುವ ಕಾದ ತವಾದ ಮೇಲೆ ಸಣ್ಣ ಸಣ್ಣ ದೋಸೆಗಳನ್ನು ಮಾಡಿ ತುಪ್ಪ ಹಾಕಿ ಎರಡೂ ಕಡೆ ಬೇಯಿಸಿ. ಈಗ ನವರಾತ್ರಿಯ ಸ್ಪೇಷಲ್  ಸೌತೆಕಾಯಿ ಸುಟ್ಟವು ರೆಡಿ.

LEAVE A REPLY

Please enter your comment!
Please enter your name here