ಸೌಕರ್ಯಗಳನ್ನ ಸದುಪಗಯೋಗ ಪಡಿಸಿಕೊಳ್ಳಿ

0
211

 
ಉಜಿರೆ ಪ್ರತಿನಿಧಿ ವರದಿ
ಕಾಲೇಜು ಎನ್ನುವುದು ದೇವಸ್ಥಾನವಿದ್ದಂತೆ. ಆದ್ದರಿಂದ ಪ್ರತಿ ದಿವಸ ಕಾಲೇಜಿಗೆ ಬರುವಾಗ ಮನಃಶುದ್ಧಿಯಿಂದ ಬರಬೇಕು. ಐವತ್ತು ವರ್ಷ ಪೂರೈಸುತ್ತಿರುವ ಸಂಸ್ಥೆಗೆ ನೀವು ಭಾಗವಾಗುತ್ತಿದ್ದೀರಿ. ಆದ್ದರಿಂದ ಕಾಲೇಜಿನ ಕೀರ್ತಿಯನ್ನು ಉತ್ಕರ್ಷಗೆ ಕೊಂಡುಯ್ಯುವ ಜವಬ್ಧಾರಿ ನಿಮ್ಮ ಮೇಲಿದೆ ಎಂದು ಉಜಿರೆ ಶ್ರೀ ಧ ಮಂ ಕಾಲೇಜಿನ ಪ್ರಾಚಾರ್ಯರಾದ ಮೋಹನ್ ನಾರಾಯಣ ಅಭಿಪ್ರಾಪಟ್ಟರು.
 
 
 
ಇವರು ಇತ್ತೀಚಿಗೆ ಕಾಲೇಜಿಗೆ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ನೆಡೆದ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಮ್ಮ ಸಂಸ್ಥೆ ನ್ಯಾಕ್ ಮೌಲ್ಯಮಾಪನದಲ್ಲಿ ಎಗ್ರೇಡ್ ಪಡೆದ ಕೆಲವೇ ಕಾಲೆಜುಗಳಲ್ಲಿ ಒಂದಾಗಿದೆ. ಪದ್ಮವಿಭೂಷಣಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಬೆಳೆಯುತ್ತದೆ. ಸಮ್ಯಗ್ ದರ್ಶನ, ಜ್ಙಾನ, ಚಾರಿತ್ರ್ಯಾಣಿ ಎಂಬ ಘೋಷ ವಾಕ್ಯವನ್ನು ಆಧಾರವಾಗಿಟ್ಟುಕೊಂಡು ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಲ್ಳಿ ಎಂದು ಕರೆಕೊಟ್ಟರು.
 
ನಂತರ ಕಾಲೇಜಿನ ವಿವಿಧ ಚಟುವಟಿಕೆಗಳ ಕುರಿತು ಅಧ್ಯಾಪಕರುಗಳಿಂದ ಮಾರ್ಗದರ್ಶನ ನೀಡಲಾಯಿತು. ಕಾಲೇಜಿನ ಎಲ್ಲಾ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ, ಪ್ರಥಮ ಪದವಿ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here