ಸೋಲಾರ್ ದೀಪ ಉತ್ಪಾದಿಸುವ ಮಹಿಳೆಯರನ್ನು ಭೇಟಿ ಮಾಡಿದ ಪ್ರಧಾನಿ

0
458

 
ವರದಿ: ಲೇಖಾ
ಭಾರತ ಸರ್ಕಾರದ ಯೋಜನೆಯಿಂದ ಸೋಲಾರ್ ದೀಪಗಳನ್ನು ಉತ್ಪಾದಿಸುವ ತರಬೇತಿ ಪಡೆದಿರುವ ಆಫ್ರಿಕಾದ ವಿವಿಧ ದೇಶಗಳ ಮಹಿಳೆಯರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು.
 
 
ತಾಂಜಾನಿಯಾಕ್ಕೆ ಭೇಟಿ ನೀಡಿರುವ ನರೇಂದ್ರ ಮೋದಿ ಮಹಿಳೆಯರೊಂದಿಗೆ ಸಂವಾದ ನಡೆಸಿ, ಸೋಲಾರ್ ದೀಪ ಉತ್ಪಾದಿಸುತ್ತಿರುವುದರಿಂದ ಆಗುತ್ತಿರುವ ಅನುಕೂಲಗಳ ಕುರಿತು ಮಾಹಿತಿ ಪಡೆದುಕೊಂಡರು. ಜತೆಗೆ ಮಹಿಳೆಯರು ತರಬೇತಿ ಪಡೆದು ತಾವೇ ಉತ್ಪಾದಿಸಿದ ಉತ್ಪನ್ನಗಳನ್ನು ಪ್ರದರ್ಶಿಸಿದರು.
 
 
ಭಾರತ ಸರ್ಕಾರವು ಆಫ್ರಿಕಾದ ವಿವಿಧ ರಾಷ್ಟ್ರಗಳಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ. ಅದರ ಭಾಗವಾಗಿ ಆಫ್ರಿಕಾದ ವಿವಿಧ ದೇಶಗಳ ಮಹಿಳೆಯರಿಗೆ ರಾಜಸ್ಥಾನದ ತಿಲೋನಿಯಾದಲ್ಲಿರುವ ಬೇರ್​ಫುಟ್ ಕಾಲೇಜಿನಲ್ಲಿ ಮನೆಯಲ್ಲೇ ಸೋಲಾರ್ ವಿದ್ಯುತ್ ದೀಪ ಉತ್ಪಾದಿಸುವ ಕುರಿತು ತರಬೇತಿ ನೀಡಿದೆ. ಜತೆಗೆ ಆಫ್ರಿಕಾದ ಇಂಜಿನಿಯರ್​ಗಳಿಗೆ ಸೋಲಾರ್ ವಿದ್ಯುತ್ ದೀಪ ಉತ್ಪಾದಿಸುವ ಕುರಿತು ತರಬೇತಿ ನೀಡಲಾಗಿದೆ.
 
 
ಭಾರತ ಸರ್ಕಾರವು ತಾಂಜಾನಿಯಾದ ಜಾಂಜಿಬಾರ್ ದ್ವೀಪದಲ್ಲಿ ಬೇರ್​ಫುಟ್ ವೊಕೇಷನಲ್ ಟ್ರೈನಿಂಗ್ ಕಾಲೇಜು ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಹೆಚ್ಚಿನ ಮಹಿಳೆಯರಿಗೆ ತರಬೇತಿ ನೀಡುವ ಉದ್ದೇಶವಿದೆ. ಜತೆಗೆ ಇಲ್ಲಿ ಟೈಲರಿಂಗ್ ಮತ್ತು ಜೇನುಸಾಕಣೆಯಂಥಹ ಹಲವು ತರಬೇತಿಗಳನ್ನು ಮಹಿಳೆಯರಿಗೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here