ಸೋನಮ್ ವಂಗ್ ಚುಕ್ ಗೆ ಪ್ರಶಸ್ತಿ

0
329

ರಾಷ್ಟ್ರೀಯ ಪ್ರತಿನಿಧಿ ವರದಿ
ಅಮೀರ್ ಖಾನ್ ಅಭಿನಯದ 2009ರ ‘3 ಈಡಿಯಟ್ಸ್’ ಚಿತ್ರದಲ್ಲಿ ಅಮೀರ್ ಖಾನ್ ರ ಫುನ್ಸುಕ್ ವಂಗ್ದು ಪಾತ್ರದ ಹಿಂದಿನ ಪ್ರೇರಣೆಯಾದ ಸೋನಮ್ ವಂಗ್ ಚುಕ್ ಅವರಿಗೆ 2016ನೇ ಸಾಲಿನ ವಿಶ್ವಮಾನ್ಯ ಪ್ರತಿಷ್ಠಿತ ರೊಲೆಕ್ಸ್ ಉದ್ಯಮ ಪ್ರಶಸ್ತಿ ದೊರಕಿದೆ.
 
 
 
 
ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಸೃಜನಾತ್ಮಕ ಯೋಚನೆ ಮತ್ತು ಚೈತನ್ಯದಿಂದ ಮರುರೂಪ ನೀಡಲು ಯತ್ನಿಸುವವರಿಗೆ ಪ್ರಶಸ್ತಿ ನೀಡಲಾಯಿತು. ಸೋನಮ್ ಅವರ ಐಸ್ ಸ್ತೂಪ ಪ್ರಾಜೆಕ್ಟ್ ಗೆ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಗಳಿಸಿದ ಐವರಲ್ಲಿ ಇವರೂ ಒಬ್ಬರಾಗಿದ್ದಾರೆ.
 
 
 
ಲಡಾಕ್ ಮೂಲದ ಎಂಜಿನಿಯರ್ ಆಗಿರುವ 50 ವರ್ಷದ ಸೋನಮ್ ವಾಂಗ್ ಚುಕ್, ಪಶ್ಚಿಮ ಹಿಮಾಲಯದಲ್ಲಿ ಮರುಭೂಮಿಯಲ್ಲಿ ಕೃಷಿಗೆ ನೀರಿನ ಕೊರತೆಯನ್ನು ನೀಗಿಸಲು ಐಸ್ ಸ್ತೂಪ ಎಲ್ಲರ ಗಮನ ಸೆಳೆದಿದ್ದಾರೆ.

LEAVE A REPLY

Please enter your comment!
Please enter your name here