ಸೈನಿಕರ ಕಲ್ಯಾಣ ನಿಧಿ ಸ್ಥಾಪನೆ

0
389

ರಾಷ್ಟ್ರೀಯ ಪ್ರತಿನಿಧಿ ವರದಿ
ತೆಲಂಗಾಣ ರಾಜ್ಯ ಸರ್ಕಾರ ಸೈನಿಕರ ಕಲ್ಯಾಣ ನಿಧಿ ಸ್ಥಾಪನೆಯಾಗಿದೆ. ಸೈನಿಕರ ಕುಟುಂಬಗಳಿಗೆ ನೆರವಾಗಲೆಂದು ಸೈನಿಕರ ಕಲ್ಯಾಣನಿಧಿ ಸ್ಥಾಪನಯಾಗಿದೆ. ಸೈನಿಕರು ಹುತಾತ್ಮರಾದರೆ ಕುಟುಂಬಕ್ಕೆ ನಿಧಿ ಆಸರೆಯಾಗಲಿದೆ.
 
 
 
ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ನಿಧಿ ಸ್ಥಾಪನೆಯಾಗಿದೆ. ಕಲ್ಯಾಣನಿಧಿಗೆ ಸಿಎಂ, ಸಚಿವರು, ಶಾಸಕರ ಕೊಡುಗೆ ಕಡ್ಡಾಯವಾಗಿದೆ. ಸಿಎಂ, ಸಚಿವರಿಂದ ಪ್ರತಿವರ್ಷವೂ 25 ಸಾವಿರ ರೂ. ದೇಣಿಗೆ ನಿಧಿಗೆ ಸೇರಲಿದೆ. ಪರಿಷತ್ ಸದಸ್ಯರು, ಸಂಸದರು 10 ಸಾವಿರ ರೂ. ದೇಣಿಗೆ ನೀಡಲಿದ್ದಾರೆ.
ಜತೆಗೆ ತೆಲಂಗಾಣ ಸರ್ಕಾರದ ನೌಕರರಿಂದಲೂ ದೇಣಿಗೆ ಕಡ್ಡಾಯವಾಗಿದೆ. ಸೈನಿಕರ ಕಲ್ಯಾಣನಿಧಿಗೆ ಸರ್ಕಾರಿ ನೌಕರರು 1 ದಿನದ ಸಂಬಳವನ್ನು ದೇಣಿಗೆ ನೀಡಲಿದ್ದಾರೆ.
 
 
 
ಸೈನಿಕರು ಹುತಾತ್ಮರಾದರೆ ಅವರ ಕುಟುಂಬಗಳಿಗೆ ಪರಿಹಾರ ಸಿಗಲಿದೆ. ಪದಕ ಪಡೆದ ಸೈನಿಕರಿಗೂ ತೆಲಂಗಾಣ ಸರ್ಕಾರ ಪ್ರಶಸ್ತಿ ನೀಡಲಿದೆ. ಪರಮವೀರ ಚಕ್ರ, ಅಶೋಕ ಚಕ್ರ ಪ್ರಶಸ್ತಿಗೆ 2.25 ಕೋಟಿ ರೂ., ಮಹಾವೀರ, ಕೀರ್ತಿ ಚಕ್ರ ಪ್ರಶಸ್ತಿ ಪಡೆದವರಿಗೆ 1.25 ಕೋಟಿ ರೂ., ಶೌರ್ಯ ಪ್ರಶಸ್ತಿ ಪಡೆದ ಸೈನಿಕರಿಗೆ 75 ಲಕ್ಷ ರೂ. ಮತ್ತು ವಿವಿಧ ಸೇವಾ ಪ್ರಶಸ್ತಿ ಪಡೆದವರಿಗೆ 30 ಲಕ್ಷ ರೂ. ನಗದು ದೊರೆಯಲಿದೆ.

LEAVE A REPLY

Please enter your comment!
Please enter your name here