ಸೈಕ್ಲಥಾನ್ ರ್ಯಾಲಿ

0
301

ವರದಿ: ಗಣೇಶ ಕಾಮತ್ ಎಂ
ಪ್ರಕೃತಿಯನ್ನು ಬೆಂಬಲಿಸಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಎನ್ನೆಸ್ಸೆಸ್ ಘಟಕ, ಮಂಗಳೂರು ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ಪಡೀಲ್ ನಿಂದ ಬೆಂಜನಪದವು ಕಾಲೇಜು ಆವರಣದವರೆಗೆ ಇತ್ತೀಚಿಗೆ ಸೈಕ್ಲಥಾನ್ ರ್ಯಾಲಿ ನಡೆಯಿತು.
 
 
ಮಂಗಳೂರಿನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗ್ಡೆ ರ್ಯಾಲಿಗೆ ಚಾಲನೆ ನೀಡಿದ್ದು, 50ಕ್ಕೂ ಅಧಿಕ ಮಂದಿ ರ್ಯಾಲಿಯಲ್ಲಿ ಪಾಲ್ಗೊಂಡು ಪರಂಗಿಪೇಟೆ, ಮಾರಿಪಳ್ಳ, ನೆತ್ತರಕೆರೆ ಮೂಲಕ 17 ಕಿ.ಮೀ. ವ್ಯಾಪ್ತಿಯ ಎತ್ತರ ತಗ್ಗಿನ ಹಾದಿಯಲ್ಲಿ ಸಾಗಿ ಕಾಲೇಜಿನ ಆವರಣದಲ್ಲಿ ಸಮಾರೋಪ ನಡೆಯಿತು.
 
 
ಕಾಲೇಜಿನ ಪ್ರಂಶುಪಾಲ ಡಾ.ಗಣೇಶ್ ವಿ. ಭಟ್, ಐಇಇಇ ಘಟಕದ ಕೌನ್ಸಿಲರ್ ಅಶ್ವಿನಿ ಹೊಳ್ಳ, ವಿದ್ಯಾರ್ಥಿ ಪ್ರಮುಖರಾದ ಅತುಲ್ ಕಾಮತ್, ರಜತ್ ಭಂಡಾರ್ಕರ್ ಮತ್ತಿತತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here