ಸೇನೆ ಮತ್ತು ಅರೆ ಮಿಲಿಟರಿ ಪಡೆಗಳ ಮಧ್ಯೆ ತಾರತಮ್ಯವೇಕೆ?

0
353

ರಾಷ್ಟ್ರೀಯ ಪ್ರತಿನಿಧಿ ವರದಿ
ಬಿಎಸ್ ಎಫ್ ಯೋಧನ ಬಳಿಕ ಇದೀಗ ಸಿಆರ್ ಪಿಎಫ್ ಪೇದೆಯ ಸರದಿ ಶುರುವಾಗಿದೆ.ಸೇನೆ ಮತ್ತು ಅರೆ ಮಿಲಿಟರಿ ಪಡೆಗಳ ಮಧ್ಯೆ ನಡೆಯುತ್ತಿರುವ ತಾರತಮ್ಯದ ಬಗ್ಗೆ ಅರೆ ಮಿಲಿಟರಿ ಪೇದೆ ಬಿಚ್ಚಿಟ್ಟಿದ್ದಾರೆ.
 
 
 
ಸಿಆರ್ ಪಿಎಫ್ ಪೇದೆಗಳು ದೇಶದಲ್ಲಿ ಯಾವ ಡ್ಯೂಟಿ ನೀಡಿದರೆ ಮಾಡೋದಿಲ್ಲ…? ಲೋಕಸಭಾ, ರಾಜ್ಯಸಭಾ, ಪಂಚಾಯತ್ ಚುನಾವಣೆ ವಿಐಪಿ, ವಿವಿಐಪಿ, ಸಂಸತ್ ಭವನ, ದೇವಾಲಯ, ಮಸೀದಿ ಎಲ್ಲಾ ಕಡೆ ನಾವು ಕೆಲಸ ಮಾಡುತ್ತೇವೆ. ಇಷ್ಟಿದ್ರೂ ಸೇನೆ ಮತ್ತು ಅರೆ ಮಿಲಿಟರಿ ಪಡೆಗೆ ಸೌಲಭ್ಯಗಳಲ್ಲಿ ತಾರತಮ್ಮವೇಕೆ..?
 
 
 
ಸಿಆರ್ ಪಿಎಫ್ ಪೇದೆ ಜೀತ್ ಸಿಂಗ್ ಸೌಲಭ್ಯ ತಾರತಮ್ಯದ ಬಗ್ಗೆ ಸೆಲ್ಫಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ಗೆ ಅಫ್ಲೋಡ್ ಮಾಡಿದ್ದಾರೆ. ಸೇನೆಗೆ ಪಿಂಚಣಿ ನೀಡಲಾಗುತ್ತದೆ, ಆದರೆ ನಮಗೆ ನೀಡುತ್ತಿದ್ದ ಪಿಂಚಣಿ ಸ್ಥಗಿತಗೊಳಿಸಲಾಗಿದೆ. 20 ವರ್ಷಗಳ ನಂತ್ರ ಕೆಲಸ ಬಿಟ್ಟು ಹೋಗುತ್ತೇವೆ, ಮಾಜಿ ಸೈನಿಕರ ಕೋಟಾವೂ ನಮಗಿಲ್ಲ. ಕ್ಯಾಂಟೀನ್ ಸೌಲಭ್ಯವಿಲ್ಲ, ಯಾವುದೇ ವೈದ್ಯಕೀಯ ಸೌಲಭ್ಯವಿಲ್ಲ. ಆದರೆ ಡ್ಯೂಟಿ ಮಾತ್ರ ನಮಗೆ ಎಲ್ಲರಿಗಿಂತಲೂ ಹೆಚ್ಚು. ಆರ್ಮಿಗೆ ನೀಡುತ್ತಿರೋ ಸೌಲಭ್ಯಗಳ ಬಗ್ಗೆ ಖಂಡಿತಾ ನಮ್ಮ ತಕರಾರಿಲ್ಲ, ಅವರಿಗೆ ಸಿಗಲೇಬೇಕು. ಆದರೆ ನಮ್ಮ ಜೊತೆ ಭೇದ-ಭಾವ ಏಕೆ..? ನಮಗೂ ಸಿಗಬೇಕು ಅಲ್ವಾ…ಎಂದು ಸಮಸ್ಯೆಯನ್ನು ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here