ಸೇನಾ ಸಿಬ್ಬಂದಿ ಸಾವು

0
237

ರಾಷ್ಟ್ರೀಯ ಪ್ರತಿನಿಧಿ ವರದಿ
ಜೀಪ್ ಮೇಲೆ ಬಂಡೆಗಲ್ಲು ಬಿದ್ದು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದ ಘಟನೆ ಹಿಮಾಚಲಪ್ರದೇಶದ ಸುಮ್ಡೊ ಬಳಿ ಪೂಹದಲ್ಲಿ ಸಂಭವಿಸಿದೆ. ವಿಜಯಪುರ ಮೂಲದ ವಿಠ್ಠಲ್ ಬೋರಗಿ(52) ಮೃತ ಪಟ್ಟ ಯೋಧನಾಗಿದ್ದಾರೆ.
 
 
ಮೃತ ಯೋಧ ಬಾರ್ಡರ್ ರೋಡ್ಸ್ ಆರ್ಗನೈಜೇಷನ್ (ಬಿಆರ್ ಓ) ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರಸ್ತೆ ತಪಾಸಣೆ ವೇಳೆ ಜೀಪ್ ಮೇಲೆ ಬಂಡೆಗಲ್ಲು ಬಿದ್ದಿದೆ.ಘಟನೆಯಲ್ಲಿ ಮೂವರಿಗೆ ಗಂಭೀರವಾಗಿ ಗಾಯವಾಗಿತ್ತು. ತಕ್ಷಣವೇ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ವಿಠ್ಠಲ ಬೋರಗಿ ಸಾವನ್ನಪ್ಪಿದ್ದಾರೆ.
 
 
 
ಮೃತ ಯೋಧ ವಿಠ್ಠಲ ಬೋರಗಿ ಅವರು ಕರ್ನಾಟಕದ ವಿಜಯಪುರ ಜಿಲ್ಲೆ ಬಾಗೇವಾಡಿ ತಾಲೂಕಿನ ದಿಂಡವಾರದವರು. ಮೃತ ವಿಠ್ಠಲ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಯೋಧನ ಪಾರ್ಥಿವ ಶರೀರ ಆಗಮನ ಕುರಿತು ಸ್ಪಷ್ಟ ಮಾಹಿತಿ ಇಲ್ಲ.

LEAVE A REPLY

Please enter your comment!
Please enter your name here