ಸೆ.5 ಶಿಕ್ಷಕರ ದಿನಾಚರಣೆ

0
522

ವಿಶೇಷ ಲೇಖನ
ಸೆಪ್ಟಂಬರ್ 5 ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
 
 
1962 ಇಸವಿಯಿಂದ “ಶಿಕ್ಷಕರ ದಿನಾಚರಣೆ” ಯು ಭಾರತದಲ್ಲಿ ಆಚರಣೆಯಲ್ಲಿದೆ. ಒಮ್ಮೆ ಡಾ.ರಾಧಾಕೃಷ್ಣನ್ ರವರ ಕೆಲವು ವಿದ್ಯಾರ್ಥಿಗಳು ಹಾಗು ಸ್ನೇಹಿತರು ಡಾ.ರಾಧಾಕೃಷ್ಣನ್ ರವರ ಹುಟ್ಟುಹಬ್ಬವನ್ನು ಆಚರಿಸಲು ಅವರ ಅನುಮತಿ ಪಡೆಯಲು ಹೋದಾಗ ಅವರು ‘ನನ್ನ ಜನ್ಮದಿನ ಆಚರಿಸುವ ಬದಲು, ಶಿಕ್ಷಕರ ದಿನ ವೆಂದು ಆಚರಿಸಿ, ಅದಕ್ಕಿಂತ ಹೆಮ್ಮೆ ಹಾಗು ಗೌರವ ಬೇರೊಂದಿಲ್ಲ ನನಗೆ’ ಎಂದರಂತೆ. ಅಂದಿನಿಂದ ಇಂದಿನವರೆಗೆ ಸೆಪ್ಟೆಂಬರ್ 5ನೇ ತಾರೀಕಿನಂದು ಡಾ.ರಾಧಾಕೃಷ್ಣನ್ ರವರ ಹುಟ್ಟುಹಬ್ಬದ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ನಡೆದುಬಂದಿದೆ.
 
ಸ್ವತಂತ್ರ ಭಾರತದ ಮೊಟ್ಟಮೊದಲ ಉಪರಾಷ್ಟ್ರಪತಿ ಹಾಗೂ ಭಾರತದ ಎರಡನೇ ರಾಷ್ಟ್ರಪತಿ ಯಾಗಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ‘ಭಾರತಿಯ ತತ್ವಜ್ಞಾನ’ ವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ತಂದವರು. ಇವರು ಒಬ್ಬ ಹೆಸರಾಂತ ಶಿಕ್ಷಣತಜ್ಣರಾಗಿದ್ದರು.

LEAVE A REPLY

Please enter your comment!
Please enter your name here