ಸೆ.18ರಿಂದ ವಿದೇಶ ಪ್ರವಾಸ

0
294

ರಾಷ್ಟ್ರೀಯ ಪ್ರತಿನಿಧಿ ವರದಿ
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೆ.18 ರಿಂದ ರಷ್ಯಾ, ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.
 
 
 
ಭಾರತದ ಮೇಲೆ ಹಾಗೂ ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ಪಾಕಿಸ್ತಾನದ ಕೃಪಾಪೋಷಿತ ಭಯೋತ್ಪಾದನೆಯನ್ನು ಎತ್ತಿತೋರಿಸುವುದು ರಾಜನಾಥ್ ಸಿಂಗ್ ಅವರ ರಷ್ಯಾ, ಅಮೆರಿಕ ಭೇಟಿಯ ಮುಖ್ಯ ಉದ್ದೇಶವಾಗಿದೆ.
 
 
ಸೆ.18 ರಿಂದ 5 ದಿನಗಳು ರಷ್ಯಾದಲ್ಲಿರಲಿರುವ ರಾಜನಾಥ್ ಸಿಂಗ್, ರಷ್ಯಾದ ಆಂತರಿಕ ಭದ್ರತಾ ಸಚಿವ ವ್ಲಾಡಿಮಿರ್ ಕೊಲೊಕೊಲ್ಟ್ ಸೇವ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
 
 
ರಷ್ಯಾ ಭೇಟಿಯ ನಂತರ ರಾಜನಾಥ್ ಸಿಂಗ್ ಅಮೆರಿಕಗೆ ಭೇಟಿ ನೀಡಲಿದ್ದು, ಸೆ.26 ರಿಂದ 7 ದಿನಗಳ ವರೆಗೆ ದ್ವಿಪಕ್ಷೀಯ ಮಾತುಕತೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here