ಸೆ.15ಕ್ಕೆ ರೈಲ್ವೆ ಬಂದ್

0
163

 
ಮಂಡ್ಯ ಪ್ರತಿನಿಧಿ ವರದಿ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ಖಂಡಿಸಿ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ರೈಲ್ವೆ ಬಂದ್ ಗೆ ಕರೆ ನೀಡಿಲಾಗಿದೆ. ರೈಲ್ವೆ ಬಂದ್ ಬಗ್ಗೆ ಕನ್ನಡ ಚಳುವಳಿ ಹೋರಾಟ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ ಅವರು ಇಂದು ಮಂಡ್ಯದಲ್ಲಿ ಘೋಷಣೆ ಮಾಡಿದ್ದಾರೆ.
 
 
 
ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ರೇಲ್ವೆ ಬಂದ್ ಗೆ ಕರೆ ನೀಡಲಾಗಿದೆ. ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಈಗ ದೇಶ ಸುಪ್ರೀಂಕೋರ್ಟ್ ಗಮನ ಸೆಳೆಯಲು ರೇಲ್ವೆ ಬಂದ್ ಮಾಡಲಾಗುತ್ತದೆ. ನಾವು ಕಡುಬು ತಿನ್ನುವುದಕ್ಕಾಗಿ ಹೋರಾಟ ಮಾಡುತ್ತಿಲ್ಲ. ಹೋರಾಟದ ಮೂಲಕ ದೇಶದ ಗಮನ ಸೆಳೆಯಲು ಯತ್ನಿಸುತ್ತಿದ್ದೇವೆ ಎಂದು ವಾಟಾಳ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here