ಸೆ.12ರ ಬದಲಿಗೆ ಸೆ.13ಕ್ಕೆ ಬಕ್ರೀದ್ ರಜೆ

0
372

ಬೆಂಗಳೂರು ಪ್ರತಿನಿಧಿ ವರದಿ
ದುಲ್ ಹಜ್ ಮಾಸದ ಚಂದ್ರದರ್ಶನದ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬದ ರಜೆಯನ್ನು ಸೆಪ್ಟೆಂಬರ್ 12ರ ಬದಲಿಗೆ ಸೆ.13ಕ್ಕೆ ನಿಗದಿಪಡಿಸಲಾಗಿದೆ.
 
 
2016ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಬಕ್ರೀದ್ ಹಬ್ಬದ ರಜೆ ಸೆಪ್ಟೆಂಬರ್ 12ಕ್ಕೆ ನಿಗದಿಯಾಗಿತ್ತು. ಇದೀಗ ಸೆ.12ರ ಬದಲಿಗೆ ಸೆ.13ಕ್ಕೆ ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
 
 
ಸಾರ್ವಜನಿಕರ ಅನುಕೂಲಕ್ಕಾಗಿ ರಜಾ ದಿನವನ್ನು ಬದಲಾಯಿಸಬೇಕು ಎಂದು ಕೇಂದ್ರ ಚಂದ್ರದರ್ಶನ ಸಮಿತಿ ಮನವಿ ಮಾಡಿದ್ದರಿಂದ ರಜಾ ದಿನವನ್ನು ಬದಲಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here