ಸೆಪ್ಟೆಂಬರ್ 2: ಮುಷ್ಕರ

0
547

 
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಂದ ಮುಷ್ಕರ
ಕಟ್ಟಡ ಮತ್ತು ನಿರ್ಮಾಣ ರಂಗದಲ್ಲಿ ಸರಕಾರಗಳ ನೀತಿಯಿಂದಾಗಿ ನಿರುದ್ಯೋಗ ಸಮಸ್ಯೆ ವ್ಯಾಪಕವಾಗಿದೆ. ಮರಳು ಮಾಫಿಯಾದಿಂದ ಮರಳು ಕೊರತೆಯಾಗಿದೆ. ಕಚ್ಚಾ ವಸ್ತುಗಳಾದ ಜಲ್ಲ್ಲಿ, ಕಬ್ಬಿಣ, ಸಿಮೆಂಟ್, ಮರ, ಪೈಂಟ್ ವಿಪರೀತ ದುಬಾರಿಯಾಗಿದೆ. ಇದರಿಂದಾಗಿ ಕೆಲಸ ಕಾರ್ಯ ಕುಂಠಿತಗೊಂಡಿದೆ. ಕೇಂದ್ರ ಸರಕಾರ ಸಾಮಾಜಿಕ ಭದ್ರತೆಯನ್ನು ಬೆಂಬಲಿಸುವ ಬದಲು ಅದನ್ನು ನಾಶಮಾಡಲು ಹೊರಟಿದೆ. ಕಲ್ಯಾಣ ಮಂಡಳಿಗೆ ಬಿಲ್ಡರ್ಸ್ ಗಳಿಂದ ಸಂಗ್ರಹಿಸುವ ಸೆಸ್ಗೆ ತಡೆ ಒಡ್ಡುವ ಹುನ್ನಾರ ಅಪಾಯಕಾರಿಯಾಗಿದೆ. ಇದರಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿರುಪಯುಕ್ತವಾಗಲಿದೆ. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸಾಮಾಜಿಕ ಭದ್ರತೆಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿ ದಿನಾಂಕ 02-09-2016ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಭಾಗವಹಿಸಲಿದ್ದು ಅಂದು ಯಾವುದೇ ಕಟ್ಟಡ ಮತ್ತು ನಿರ್ಮಾಣ ಕೆಲಸಗಳು ನಡೆಯುವುದಿಲ್ಲವೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 
 
 
ಬೀಡಿ ಕಾರ್ಮಿಕರಿಂದ ಮುಷ್ಕರ
ಕೇಂದ್ರ ಸರಕಾರ ಬೀಡಿ ಕಾರ್ಮಿಕರನ್ನು ಬೀದಿಪಾಲು ಮಾಡುವ ಕೋಟ್ಪಾ ನೀತಿಯನ್ನು ಜಾರಿಗೊಳಿಸುತ್ತಿದೆ. 85% ಅಪಾಯಕಾರಿ ಸಚಿತ್ರವನ್ನು ಮುದ್ರಿಸಲು ತೊಂದರೆ ಇಲ್ಲ ಎಂಬ ಅಫಿದಾವಿತ್ ನ್ನು ಸುಪ್ರೀಂಕೋರ್ಟ್ ಗೆ ನೀಡಿದೆ. ಇದರಿಂದಾಗಿ ಬೀಡಿ ಕೈಗಾರಿಕೆ ಬಿಕ್ಕಟ್ಟಿನ ಹಾದಿ ತುಳಿದಿದೆ. ಬೀಡಿ ಕೈಗಾರಿಕೆ ಕುಸಿಯುತ್ತಿರುವಾಗ ಬೀಡಿ ಕಾರ್ಮಿಕರಿಗೆ ನೀಡಬೇಕಾದ ಪರ್ಯಾಯ ಉದ್ಯೋಗ ಅಥವಾ ಪರಿಹಾರದ ಬಗ್ಗೆ ಪ್ರಸ್ತಾಪವೇ ಇಲ್ಲ. ಬೀಡಿ ಕಾರ್ಮಿಕರಿಗೆ ನೀಡಬೇಕಾದ ಏರಿಕೆ ತುಟ್ಟಿಭತ್ತೆ 2015ಕ್ಕೆ ವಿನಾಯಿತಿಯು ಕೂಡಾ ಬೀಡಿ ಕಾರ್ಮಿಕ ವಿರೋಧಿಯಾಗಿದೆ. ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ 300/- ರೂ. ನೀಡಬೇಕು. ಬೀಡಿ ಪೆನ್ಶನ್ ದಾರರಿಗೆ ಕನಿಷ್ಟ 3,000 ರೂ. ಪಿಂಚಣಿ ನಿಗದಿಪಡಿಸಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬೆಲೆ ಏರಿಕೆಯನ್ನು ನಿಯಂತ್ರಣಗೊಳಿಸಬೇಕೆಂದು ಒತ್ತಾಯಿಸಿ 2016ರ ಸೆಪ್ಟೆಂಬರ್ 2ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರದಲ್ಲಿ ದ.ಕ. ಜಿಲ್ಲೆಯ ಬೀಡಿ ಕಾರ್ಮಿಕರು ಭಾಗವಹಿಸಲಿದ್ದಾರೆ. ಅಂದು ಬೀಡಿ ಕೈಗಾರಿಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಇದರ ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here