ಸೆಪ್ಟಂಬರ್ 28ರಂದು ಬೆಳ್ತಂಗಡಿ ತಾಲೂಕಿನಲ್ಲಿ ಯಾತ್ರೆ

0
284

ಬೆಳ್ತಂಗಡಿ ಪ್ರತಿನಿಧಿ ವರದಿ
ಮಂಗಲಗೋಯಾತ್ರೆಯ ಯಶಸ್ಸಿಗಾಗಿ ಗೋ – ಕಿಂಕರ ಯಾತ್ರೆ
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ 80ದಿನಗಳ ಕಾಲ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ,ತೆಲಂಗಾಣ ಹಾಗೂ ಆಂಧ್ರದಲ್ಲಿ ಯಾತ್ರೆ ಸಂಚರಿಸಲಿದ್ದು ಗೋವಿನ ಕುರಿತು ಜನಮಾನಸದಲ್ಲಿ ಹೊಸ ಜಾಗರೂಕತೆಯನ್ನು ಹುಟ್ಟುಹಾಕುವ ಒಂದು ಪ್ರಯತ್ನ ಮಂಗಲಗೋಯಾತ್ರೆ-ಜಗನ್ಮಾತೆಯ ಜಗದ್ಯಾತ್ರೆ ನವೆಂಬರ್ 8ರಿಂದ 26ರ ತನಕ ನಡೆಯಲಿದೆ.
 
mata_vaarte
ಗೋವಿಗಾಗಿ ಅತ್ಮಾರ್ಪಣೆ ಮಾಡಿದ ಮಂಗಲಪಾಂಡೆಯ ಪ್ರೇರಣೆಯಲ್ಲಿ ಈ ಮಂಗಲಗೋಯಾತ್ರೆಯ ಸಂಕಲ್ಪವನ್ನು ಶ್ರೀಗಳು ಮಾಡಿದ್ದು ಅದಕ್ಕಿಂತ ಮೊದಲು ಕರ್ನಾಟಕದ ಪ್ರತೀ ತಾಲೂಕನ್ನು ಸ್ಪರ್ಶಿಸುವ `ಗೋಕಿಂಕರಯಾತ್ರೆ’ ಇದೇ ಸೆಪ್ಟಂಬರ್ 28ರಂದು ಬೆಳ್ತಂಗಡಿ ತಾಲೂಕಿನಾದ್ಯಂತ ಸಂಚರಿಸಲಿದೆ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಪ್ರಮುಖ್ ಡಾ.ವೈವಿ ಕೃಷ್ಣಮೂರ್ತಿ ಸಭೆಗೆ ತಿಳಿಸಿದ್ದಾರೆ.
 
 
ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಗೋಕಿಂಕರ ಯಾತ್ರೆ ಐದು ರಾಜ್ಯಗಳ ಪುಣ್ಯ ಸ್ಥಾನಗಳಿಂದ ಹೊರಡಲಿದೆ. ಇದಕ್ಕಾಗಿ ಪಂಚರಥಗಳು ಕರ್ನಾಟಕದ ಬೆಂಗಳೂರಿನ ದೊಡ್ಡಬಸವ ಸನ್ನಿಧಿ, ಕೇರಳದ ಮಧೂರು, ಗೋವಾದ ರಾಮನಾಥಿ, ಆಂಧ್ರದ ಮಂತ್ರಾಲಯ ಮತ್ತು ಮಹಾರಾಷ್ಟ್ರದ ಪಂಢರಾಪುರಗಳಿಂದ ಹೊರಡಲಿದೆ ಎಂದವರು ಮಾಹಿತಿ ನೀಡಿದರು.
 
 
ಅತಿಥಿಗಳಾಗಿ ಪಾಲ್ಗೊಂಡ ಗೋಯಾತ್ರೆಯ ಜಿಲ್ಲಾ ಸಂಚಾಲಕ ರಾಜಾರಾಮ್ ಶೆಟ್ಟಿ ತಾಲೂಕಿಗೆ ಆಗಮಿಸಲಿರುವ ಗೋ ರಥವನ್ನು ಹೊಸಂಗಡಿಯಲ್ಲಿ ಸ್ವಾಗತಿಸಲಾಗುವುದು. ಅಲ್ಲಿಂದ ವೇಣೂರಿಗೆ ರಥವನ್ನು ಬರಮಾಡಿಕೊಂಡು ವೇಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ನಡೆಯಲಿದೆ. ಅಲ್ಲಿಂದ ಮುಂದೆ ಗುರುವಾಯನ ಕೆರೆ, ಧರ್ಮಸ್ಥಳ, ಕಲ್ಲೇರಿಗಳಿಗೆ ಯಾತ್ರೆ ತೆರಳಿ ಸಭೆಗಳು ನಡೆಯಲಿವೆ. ಸಾಯಂಕಾಲ ಬಳ್ಳಮಂಜದಲ್ಲಿ ಯಾತ್ರೆ ಕೊನೆಗೊಳ್ಳಲಿದೆ. ಮರುದಿನ ಬಂಟ್ವಾಳ ತಾಲೂಕಿನಲ್ಲಿ ಯಾತ್ರೆ ಮುಂದುವರಿಯುವುದು ಎಂದವರು ತಿಳಿಸಿದರು.
 
 
ಶ್ರೀ.ಧ.ಗ್ರಾ.ಯೋಜನೆಯ ಗಣೇಶ್ ಭಟ್, ಬಾಲ್ಯ ಶಂಕರ ಭಟ್, ಶೈಲಜಾ ಭಟ್ ವೇದಿಕೆಯಲ್ಲಿದ್ದರು. ದೇವಿಕಾ ಶಾಸ್ತ್ರಿ ಸ್ವಾಗತಿಸಿದರು. ಅತ್ತಾಜೆ ಕೇಶವ ಭಟ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here