ಸೃಜನಶೀಲತೆ ಮತ್ತು ನಿರಂತರ ಕಲಿಕೆ ಅಗತ್ಯ

0
287

 
ವರದಿ: ಸುನೀಲ್ ಬೇಕಲ್
ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಫೊಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ನಡೆಯಿತು.
 
 
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನೇಷನಲ್ ಅಕಾಡಮಿ ಆಫ್ ರುಡ್ ಸೆಟ್ ನ ಮಹಾ ಪ್ರಬಂಧಕರಾದ ಎನ್.ಎಮ್. ಭಟ್ರವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುತ್ತಾ ಸೃಜನಶೀಲತೆ ಮತ್ತು ನಿರಂತರ ಕಲಿಕೆಯನ್ನು ಬೆಳೆಸಿಕೊಂಡು ಸ್ವಂತ ಉದ್ಯಮದಲ್ಲಿ ಯಶಸ್ಸನ್ನು ಗಳಿಸಿಕೊಳ್ಳಿ ಎಂದು ಮಾರ್ಗದರ್ಶನ ನೀಡಿದರು.
 
 
 
ಈ ತಿಂಗಳಲ್ಲಿ ನಿವೃತಿ ಹೊಂದುತ್ತಿರುವ ಅವರನ್ನು ರುಡ್ ಸೆಟ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯ್ತು. ಮುಂದಿನ ಮಹಾ ಪ್ರಬಂಧಕರಾದ ಆರ್.ಆರ್. ಸಿಂಗ್ ರವರನ್ನು ಸ್ವಾಗತಿಸಲಾಯ್ತು. ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಅರುಣ ವಿ.ಜೆ. ರವರು ವಹಿಸಿದರು. ವೇದಿಕೆಯಲ್ಲಿ ನೇಷನಲ್ ಅಕಾಡಮಿ ಆಫ್ ರುಡ್ ಸೆಟ್ ಉಪನ್ಯಾಸಕರಾದ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.
 
 
ಸಂಸ್ಥೆಯ ನಿರ್ದೇಶಕರಾದ ಅಜಿತ್ ಕೆ. ರಾಜಣ್ಣವರ್ ಅತಿಥಿಗಳನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕರುಗಳಾದ ಅನಸೂಯ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಅಬ್ರಹಾಂ ಜೇಮ್ಸ್ ವಂದಿಸಿದರು.

LEAVE A REPLY

Please enter your comment!
Please enter your name here