ಸುಹಾನಾಗೆ ಧರ್ಮ ಸಂಕಟ: ಉರ್ದು ಮಂಚ್ ಬೆಂಬಲ

0
291

ನಮ್ಮ ಪ್ರತಿನಿಧಿ ವರದಿ
ಸುಹಾನಾ ಹಿಂದು ದೇವರ ಬಗ್ಗೆ ಹಾಡು ಹಾಡಿದ್ದ ಪ್ರಕರಣದಲ್ಲಿ ರಾಜ್ಯದ ಕೆಲ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸುಹಾನಾಗೆ ಉರ್ದು ಮಂಚ್ ಬೆಂಬಲ ನೀಡಿದೆ.
 
 
 
ಸಂಘಟನೆಗಳ ವಿರೋಧಗಳ ವಿರುದ್ಧ ಅಖಿಲ ಭಾರತ ಉರ್ದು ಮಂಚ್ ಕಿಡಿಕಾರಿದೆ. ಹಲವು ಸೂಫಿ ಸಂತರು ಅನ್ಯ ಧರ್ಮದ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಇದೀಗ ಕೆಲ ಪಟ್ಟಭದ್ರರಿಂದ ಕೋಮು ಸಾಮರಸ್ಯಕ್ಕೆ ಕುತ್ತು ತರುತ್ತಿದೆ ಎಂದು ಅಖಿಲ ಭಾರತ ಉರ್ದು ಮಂಚ್ ನ ಅಧ್ಯಕ್ಷ ರವೂಫ್ ಖಾದ್ರಿ ಆರೋಪಿಸಿದ್ದಾರೆ.
 
 
ಸುಹಾನಾ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಬೇಕು. ಪ್ರಗತಿಪರರು, ಬುದ್ಧಿಜೀವಿಗಳು ಸುಹಾನಾ ಪರ ನಿಲ್ಲಬೇಕು ಎಂದು ಕಲಬುರಗಿಯಲ್ಲಿ ರವೂಫ್ ಖಾದ್ರಿ ಆಗ್ರಹಿಸಿದ್ಧಾರೆ.

LEAVE A REPLY

Please enter your comment!
Please enter your name here